ಮೈಸೂರು: ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ.ವಿಷ್ಣುವರ್ಧನ್ ಅವರು 12ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಹಳೆಯ ನೆನಪುಗಳನ್ನು ಖಾಸಗಿ ಹೋಟೆಲ್ ಸಿಬ್ಬಂದಿಯೊಬ್ಬರು ಮೆಲುಕು ಹಾಕಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಿಷ್ಣುವರ್ಧನ್ ಅವರು ಜೀವನದ ಕೊನೆಯ ದಿನಗಳನ್ನು ಕಳೆದಿದ್ದರು.
ಈ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿರುವ ಹೋಟೆಲ್ ಮ್ಯಾನೇಜರ್ ಶ್ರೀನಿವಾಸ ಹಳೆಯ ಕ್ಷಣಗಳನ್ನು ಸ್ಮರಿಸಿದ್ದಾರೆ.
2009ರ ಡಿಸೆಂಬರ್ 10 ರಿಂದ ವಿಷ್ಣು ಅವರು ನಮ್ಮ ಹೋಟೆಲ್‌ನಲ್ಲೇ ಇದ್ದರು. ಕಾಲಿಗೆ ನೋವಾಗಿದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದರು. ಡಿಸೆಂಬರ್ 30ರಂದು ಎದೆನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಹೋದವರು ಮೃತಪಟ್ಟಿದ್ದಾರೆಂದು ಗೊತ್ತಾಯ್ತು ಎಂದು ತಿಳಿಸಿದ್ದಾರೆ.
ಮೈಸೂರಿನ ಯಾದವಗಿರಿಯಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದರು. ಜನವರಿ 1ರಂದು ಗೃಹ ಪ್ರವೇಶ ಮಾಡಲು ತಯಾರಿ ಮಾಡಿಕೊಂಡಿದ್ದರು. ಆದರೆ ವಿಧಿ ಅವಕಾಶ ಕೊಡಲಿಲ್ಲ. ಅಷ್ಟು ದೊಡ್ಡ ನಟ ನಮ್ಮಂತಹ ಕಾರ್ಮಿಕರ ಜತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ವಿಷ್ಣು ಅವರನ್ನು ನೆನಪಿಸಿಕೊಳ್ಳದೆ ಇರುವ ದಿನವೇ ಇಲ್ಲ ಎಂದು ದಿಗ್ವಿಜಯ ನ್ಯೂಸ್ ಜತೆ ಹೋಟೆಲ್ ಮ್ಯಾನೇಜರ್ ಹಳೆಯ ಕ್ಷಣಗಳನ್ನು ನೆನಪು ಮಾಡಿಕೊಂಡರು.
Laxmi News 24×7