Breaking News

BJP ಕಾರ್ಯಕಾರಿಣಿಯಲ್ಲಿ ಬೆಲ್ಲದ್ ತಲೆದಂಡ:

Spread the love

ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಬಿಜೆಪಿ ಕಾರ್ಯಕಾರಿಣಿ (BJP Executive Meeting) ಹಲವು ವಿಚಾರಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಉಪ ಚುನಾವಣೆ (By Election Results), ವಿಧಾನ ಪರಿಷತ್ ಫಲಿತಾಂಶದ (MLC Election Results) ನಂತರ ನಡೆಯುತ್ತಿರೋ ಕಾರ್ಯಕಾರಿಣಿಯಾಗಿರೋದರ ಜೊತೆಗೆ, ಮುಂಬರುವ ಚುನಾವಣೆಗಳ ಕಾರಣದಿಂದಾಗಿ ಮಹತ್ವದ್ದಾಗಿದೆ.

ಕಾರ್ಯಕಾರಿಣಿಯಲ್ಲಿ ಬಿಸಿಯೇರಿದ ರಾಜಕೀಯ ಚರ್ಚೆಗಳೂ ನಡೆದಿದ್ದು, ಅರವಿಂದ್ ಬೆಲ್ಲದ್ (Aravind Bellad) ರೂಪದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಮೇಲ್ನೋಟಕ್ಕೆ ಅಶಿಸ್ತು ಪ್ರದರ್ಶಿಸಿರೋ ಜಾರಕಿಹೊಳಿ ಸಹೋದರರ (Jakriholi Brothers) ವಿರುದ್ಧವೂ ಕಾರ್ಯಕಾರಿಣಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಾ ಅನ್ನೋ ಪ್ರಶ್ನೆಯೂ ಈಗ ಎದ್ದಿದೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಕಾರ್ಯಕಾರಿಣಿಗೆ ಮೊದಲ ವಿಕೆಟ್ ಪತನಗೊಂಡಿದೆ. ಶಾಸಕ ಅರವಿಂದ್ ಬೆಲ್ಲದ್ ಹುಬ್ಬಳ್ಳಿ – ಧಾರವಾಡ ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿಯೇ ಅರವಿಂದ್ ಬೆಲ್ಲದ್ ರಾಜೀನಾಮೆ ಘೋಷಿಸಿದ್ದಾರೆ.

ಧಾರವಾಡ ಬಿಜೆಪಿಯಲ್ಲಿ ಭಿನ್ನಮತ

ಇದರೊಂದಿಗೆ ಧಾರವಾಡದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಧಾರವಾಡ ಅಂದ್ರೆ ಬಿಜೆಪಿಯ ಭದ್ರಕೋಟೆ ಅನ್ನೋ ಮಾತಿದೆ. ಅದೇ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಆಯೋಜನೆ ಮಾಡಲಾಗಿದೆ. ಆದರೆ ಪಕ್ಷದ ಆಂತರಿಕ ಚಟುವಟಿಕೆಗಳಿಂದ ಬೇಸತ್ತು ಬೆಲ್ಲದ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

: BJP ಕಾರ್ಯಕಾರಿಣಿ ಸಭೆ: BSY ಫ್ಯಾಮಿಲಿ, ಜಾರಕಿಹೊಳಿ ಬ್ರದರ್ಸ್ ಗೈರಿನ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ?

ಮಹಾನಗರ ಘಟಕ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿ ಮಾಡಿ ಎಂದು ಶಾಸಕ ಅರವಿಂದ ಬೆಲ್ಲದ ಕೇಳಿಕೊಂಡಿದ್ದಾರೆ. ಕಾರ್ಯಕಾರಣಿಯಲ್ಲಿಯೇ ತಮ್ಮ ರಾಜೀನಾಮೆ ಪ್ರಸ್ತಾಪಿಸಿರೋ ಬೆಲ್ಲದ್, ಅಲ್ಲಿಯೇ ರಾಜೀನಾಮೆ ಪತ್ರ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಶೆಟ್ಟರ್ ಅಸಮಾಧಾನಗೊಂಡಿದ್ದುದು ಇದಕ್ಕೆ ಕಾರಣ ಎಂಬ ಮಾಹಿತಿ ಇದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಎರಡನೇ ಪ್ರಾಶಸ್ತ್ಯ ಮತದಲ್ಲಿ ಗೆಲುವು ಸಾಧಿಸಿದ್ದರು.

ಇದರಿಂದಾಗಿ ತೀವ್ರ ಬೇಸರಗೊಂಡಿದ್ದ ಮಾಜಿ ಜಗದೀಶ್ ಶೆಟ್ಟರ್, ದೆಹಲಿಗೆ ತೆರಳಿ ಹೈಕಮಾಂಡ್ ಗೂ ದೂರು ನೀಡೋಕೆ ಮುಂದಾಗಿದ್ದರು. ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಯಾಗಿ ದೂರು ನೀಡೋಕೆ ಗಂಭೀರ ಚಿಂತನೆ ನಡೆಸಿದ್ದರು. ಅರವಿಂದ್ ಬೆಲ್ಲದ್ ವಿರುದ್ಧ ದೂರು ಕೊಡಲು ಮುಂದಾಗಿದ್ದುದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಬೇಸತ್ತು ಬೆಲ್ಲದ್ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಜಾರಕಿಹೊಳಿ ಸಹೋದರರ ಮೇಲೂ ತೂಗುಕತ್ತಿ….!?

ಅರವಿಂದ್ ಬೆಲ್ಲದ್ ತಲೆದಂಡದ ಬೆನ್ನ ಹಿಂದೆಯೇ ಜಾರಕಿಹೊಳಿ ಸಹೋದರರ ವಿರುದ್ಧವೂ ಕ್ರಮವಾಗುತ್ತೆ ಅನ್ನೋ ಗುಸು ಗುಸು ಬಿಜೆಪಿ ವಲಯದಲ್ಲಿ ಶುರವಾಗಿದೆ. ಎರಡನೆಯ ದಿನ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಶಿಸ್ತುಕ್ರಮವಾಗುತ್ತಾ.? ಅನ್ನೋ ಪ್ರಶ್ನೆ ಎದ್ದಿದೆ. ಮೊದಲ ದಿನ ಸರ್ಕಾರದ ಸಾಧನೆಯ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು. ಎರಡನೆಯ ದಿನ ಈ ಹಿಂದಿನ ಚುನಾವಣೆಗಳಲ್ಲಿನ ಸೋಲಿನ ಪರಾಮರ್ಶೆ ಮಹತ್ವ ಪಡೆಯಲಿದೆ ಎನ್ನಲಾಗಿದೆ.
: CM Bommai: ಸಿಎಂ ಬೊಮ್ಮಾಯಿ ಮಂಡಿನೋವಿಗೆ ಚಿಕಿತ್ಸೆ ನೀಡಿದ್ದು ನಕಲಿ ನಾಟಿ ವೈದ್ಯನಾ? ಇಲ್ಲಿದೆ ಅಸಲಿ ಕಹಾನಿ?

ಬಿಜೆಪಿ ಹೈಕಮಾಂಡ್ ಬೆಳಗಾವಿ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಕಾರ್ಯಕಾರಿಣಿ ಮೂಲಕ ಸ್ಪಷ್ಟ ಸಂದೇಶ ರವಾನಿಸೋ ಸಾಧ್ಯತೆಗಳಿವೆ.

ಬೆಳಗಾವಿ ಸೋಲಿನ ಕುರಿತು ಚರ್ಚೆ

ಬೇಡ ಬೇಡವೆಂದರೂ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದ್ದ ಜಾರಕಿಹೊಳಿ ಬ್ರದರ್ಸ್, ತಮ್ಮ ಸಹೋದರ ಲಖನ್ ಜಾರಕಿಹೊಳಿ ಯನ್ನು ಗೆಲ್ಲಿಸಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣವಾದ ಅಂಶಗಳ ಕುರಿತು ಚರ್ಚೆ ನಡೆಯಲಿದೆ.

ಜಾರಕಿಹೊಳಿ ಸಹೋದರರ ಇಬ್ಬಗೆಯ ನೀತಿಯ ಬಗ್ಗೆಯೂ ಚರ್ಚೆ ನಡೆಯೋ ಸಾಧ್ಯತೆಗಳಿವೆ. ಬಿಜೆಪಿ ಅಶಿಸ್ತನ್ನೂ ಎಂದಿಗೂ ಸಹಿಸೋಲ್ಲ ಎಂದು ಬಿಜೆಪಿ ಹಿರಿಯ ನಾಯಕರು ಈಗಾಗಲೇ ಸಂದೇಶ ರವಾನಿಸಿದ್ದಾರೆ.

ಬೆಳಗಾವಿ ವಿಭಾಗದಲ್ಲಿ ಬರೋ ಹುಬ್ಬಳ್ಳಿಯಲ್ಲಿಯೇ ಕಾರ್ಯಕಾರಿಣಿ ನಡೆಯುತ್ತಿದ್ದರೂ ಜಾರಕಿಹೊಳಿ ಬ್ರದರ್ಸ್ ಇತ್ತ ಕಡೆ ಸುಳಿದಿಲ್ಲ. ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂಬ ಮಾಹಿತಿ ಇದೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಕುರಿತು ಗಂಭೀರ ಸಮಾಲೋಚನೆ ನಡೆಯಲಿದೆ. ಹೈಕಮಾಂಡ್ ಧೈರ್ಯ ತೋರಿದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಖಚಿತ ಅನ್ನೋ ಮಾತೂ ಕೇಳಿ ಬರ್ತಿದೆ. ಇಂದಿನ ಕಾರ್ಯಕಾರಿಣಿಯಲ್ಲಿ ಇದೆಲ್ಲಕ್ಕೂ ಉತ್ತರ ಸಿಗೋ ಸಾಧ್ಯತೆಗಳಿವೆ.


Spread the love

About Laxminews 24x7

Check Also

Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು

Spread the love ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ