Breaking News

ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ ‘ಮಹಾ’ ಜಲಾಶಯದ ನೀರು: ಹೈ ಅಲರ್ಟ್‌ ಘೋಷಣೆ

Spread the love

ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಗೇಟ್ ರಿಪೇರಿ ವೇಳೆ ಅವಘಡ ಸಂಭವಿಸಿದ್ದು, ತಾಂತ್ರಿಕ ದೋಷದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದುಬಂದಿದೆ.

ಸುಮಾರು 18 ಅಡಿಗಳಷ್ಟು ಗೇಟ್ ಎತ್ತರಿಸಿ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದರು.

ಈ ವೇಳೆ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ, ಅಧಿಕಾರಿಗಳ ಎಡವಟ್ಟಿನಿಂದ ನದಿ ತೀರದ ಜನರು ಕಂಗೆಟ್ಟು ಹೋಗಿದ್ದು, ಇಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ವೇದಗಂಗಾ ನದಿ ತೀರದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಕಂಗಾಲಾಗಿ ಹೋಗಿದ್ದಾರೆ. ಅಧಿಕಾರಿಗಳು ಮಾಡಿರುವ ಈ ಎಡವಟ್ಟಿನಿಂದ ಕರ್ನಾಟಕದತ್ತ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಒಟ್ಟಾರೆ ಎಂಟು ಟಿ ಎಂ‌ ಸಿ ಸಾಮರ್ಥ್ಯ ಇರುವ ಜಲಾಶಯ ಇದಾಗಿದೆ. ಆರು ಗೇಟ್‌ಗಳ ಪೈಕಿ ಒಂದು ಗೇಟ್ ದುರಸ್ಥಿ ಮಾಡುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.


Spread the love

About Laxminews 24x7

Check Also

ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ

Spread the love ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ ಕರ್ನಾಟಕದಲ್ಲಿ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಅಡಿ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ