ಹಲವು ಸ್ವಾಮೀಜಿಗಳ ವಿರೋಧದ ಮಧ್ಯೆ ಈ ವಿವಾದ 25 ವಷ೯ಗಳ ಹಿಂದೆ ಹೈಕೋರ್ಟ್ , ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ ಆದೇಶದಂತೆ ಬಳಕೆ
ಬಸವಣ್ಣನವರ ವಚನಗಳ (Basavanna Vachana) ಅಂಕಿತ ನಾಮ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾತೆ ಗಂಗಾದೇವಿ, ಹೈಕೋರ್ಟ್ ಆದೇಶದಂತೆ ಇನ್ನು ಮುಂದೆ ವಚನಗಳಿಗೆ ಕೂಡಲಸಂಗಮದೇವ ಎಂದು ಬಳಸುತ್ತೇವೆ. ಲಿಂಗದೇವ ಎಂಬ ಅಂಕಿತನಾಮವನ್ನ ಹಿಂಪಡೆದಿದೆ. ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಬದಲಾಗಿ ಲಿಂಗದೇವ ಎಂದು ಅಂಕಿತನಾಮ ಬಳಸಲಾಗುತ್ತಿತ್ತು. ಈಗ ನ್ಯಾಯಾಲಯದ ಆದೇಶ ಕೂಡ ಕೂಡಲ ಸಂಗಮದೇವ ಎಂದು ಬಳಸಬೇಕು ಅಂತ ಇದೆ. ಹೀಗಾಗಿ ಇನ್ನು ಮುಂದೆ ಯಾವುದೇ ಗೊಂದಲ ಬೇಡ. ಬಸವಣ್ಣನವರ ವಚನಗಳ ಅಂಕಿತ ನಾಮದ ಗೊಂದಲಕ್ಕೆ ತೆರೆ ಎಳೆದಿದ್ದು, ಕೂಡಲಸಂಗಮದೇವ ಎಂದು ಬಳಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಏನಿದು ನಾಮಾಂಕಿತ ವಿವಾದ..?
ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಎಂದು ನಾಮಾಂಕಿತ ಇತ್ತು. 1996ರಲ್ಲಿ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನಾಮಾಂಕಿತ ಬದಲಾವಣೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದರು. ವಚನಗಳ ಸಂಶೋಧನೆಯಿಂದ ರಚಿಸಿದ “ಬಸವ ವಚನ ದೀಪ್ತಿ” ಯಲ್ಲಿ ಕೂಡಲಸಂಗಮದೇವ ಎನ್ನುವ ಬದಲು ಲಿಂಗದೇವ ಎಂದು ಬದಲಾವಣೆ ಮಾಡಲಾಗಿತ್ತು. ನಾಮಾಂಕಿತ ಬದಲಾವಣೆ ವಿಚಾರ ವಿವಾದಕ್ಕೆ ಕಾರಣವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಬಸವಣ್ಣನವರ ಅನುಯಾಯಿಗಳು ಪ್ರತಿಭಟನೆ ಮಾಡಿದ್ದರು.
ಇದನ್ನು : ಗೋವಾ-ಕರ್ನಾಟಕಗೂ ನಂಟು ಇರುವ ಕೋಟಿ ತೀರ್ಥ ಕಲ್ಯಾಣಿಯ ವಿಶೇಷತೆ ಬಗ್ಗೆ ಗೊತ್ತೇ?
ಮಾತೆ ಮಹಾದೇವಿ ಮೇಲೆ ಆಕ್ರೋಶ
ಮಾತೆ ಮಹಾದೇವಿಯವರ ಮೇಲೆ ಆಕ್ರೋಶ, ಆರೋಪ ಕೇಳಿಬಂದಿತ್ತು. ಬಳಿಕ ಬಸವಧರ್ಮ ಪೀಠದಿಂದ ರಚಿಸುವ ಪುಸ್ತಕಗಳಲ್ಲಿ ಲಿಂಗದೇವ ಎಂದೇ ನಾಮಾಂಕಿತ ಬಳಸಲಾಗಿತ್ತು. ಮಾತೆ ಮಹಾದೇವಿಯವರ ವಚನ ದೀಪ್ತಿ ಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಹೈಕೋರ್ಟ್ ನಲ್ಲಿ ಕೂಡಲಸಂಗಮದೇವ ಎಂಬ ನಾಮಾಂಕಿತವನ್ನೇ ಬಳಸಬೇಕು ಎಂದು ಆದೇಶ ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಾತೆ ಮಹಾದೇವಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2017ರಲ್ಲಿ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ಆದೇಶ ಎತ್ತಿಹಿಡಿತ್ತು.
ಇದನ್ನು : ಗಂಡನನ್ನು ಬಿಡಲು ಮುಂದಾಗಿದ್ದ ಮಹಿಳೆಯನ್ನು ತಡೆದ ಇನ್ಸ್ಪೆಕ್ಟರ್ಗೆ ₹1 ಲಕ್ಷ ದಂಡ!
ಕೋರ್ಟ್ ಆದೇಶದ ಬಳಿಕವೂ ಮುಂದುವರೆದ ಗೊಂದಲ
ಕೋರ್ಟ್ ಆದೇಶದ ಬಳಿಕವು ನಾಮಾಂಕಿತದ ಗೊಂದಲ ಹಾಗೆ ಉಳಿದಿತ್ತು. ಇದು ಬಸವಧರ್ಮ ಪೀಠದ ಅನುಯಾಯಿಗಳು ಹಾಗೂ ಬಸವ ಅನುಯಾಯಿಗಳಲ್ಲಿ ಅಸಮಾಧಾನ ಇತ್ತು. ಇಂದು ಅಧಿಕೃತವಾಗಿ ಈಗಿನ ಪೀಠಾಧ್ಯಕ್ಷೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಮುಂದಿನ ಎಲ್ಲ ಗ್ರಂಥಗಳಲ್ಲಿ ಕೂಡಲಸಂಗಮದೇವ ಎಂಬ ನಾಮಾಂಕಿತವನ್ನೇ ಬಳಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬಸವಧರ್ಮ ಪೀಠದ ಉತ್ತರಾಧಿಕಾರಿ ಮಹದೇಶ್ವರ ಸ್ವಾಮೀಜಿ ಮಾತನಾಡಿ, ಮಾತಾಜಿಯವರ ನಿರ್ಧಾರ ಚಾರಿತ್ರಿಕವಾದ ನಿರ್ಧಾರ. ಲಿಂಗೈಕ್ಯ ಮಾತಾಜಿಯವರು ಕೋರ್ಟ್ ಆದೇಶವನ್ನು ಗೌರವಿಸಿದ್ದರು. ಈಗಿನ ಮಾತಾಜಿಯಾವರು ಆದೇಶವನ್ನು ಗೌರವಿಸಿದ್ದಾರೆ. ಹೀಗಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.