ನಾಡದ್ರೋಹಿ ಎಂಇಎಸ್ ನಿμÉೀಧಕ್ಕೆ ಆಗ್ರಹಿಸಿ ಡಿ.31ರಂದು ಕರ್ನಾಟಕ ಬಂದ್‍ಗೆ ಬೆಳಗಾವಿ ಜಿಲ್ಲೆಯ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ಹೌದು ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಇನ್ನಿತರ ಕನ್ನಡ ಹೋರಾಟಗಾರರು ಡಿ.31ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ಆದರೆ ಈ ಬಂದ್‍ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ನಡುವೆ ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿಲ್ಲ. ಮಂಗಳವಾರ ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದ ಕನ್ನಡ ಹೋರಾಟಗಾರರು ಬಂದ್‍ಗೆ ಬೆಂಬಲ ಸೂಚಿಸದೇ ಇರುವುದಕ್ಕೆ ನಿರ್ಧರಿಸಿದರು. ಈ ವೇಳೆ ಮಾತನಾಡಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಚಂದರಗಿ ಶುಕ್ರವಾರ ಡಿ.31 ರಂದು ಕರ್ನಾಟಕ ಬಂದ್‍ಗೆ ಕರೆ ವಿಚಾರ ಸಂದರ್ಭದಲ್ಲಿ ಎಂಇಎಸ್ ಜೊತೆ ಶಿವಸೇನೆ ನಿμÉೀಧ ಮಾಡಬೇಕೆಂಬ ಒತ್ತಾಯ ಇದ್ದು, ಎಲ್ಲದಕ್ಕೂ ಬಂದ್ ಒಂದೇ ಪರಿಹಾರ ಅಲ್ಲ.
ಈಗಾಗಲೇ ಎಂಇಎಸ್ ಪುಂಡರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ದೇಶದ್ರೋಹ ಸೇರಿ ಬಹಳ ಗಂಭೀರ ಪ್ರಕರಣ ದಾಖಲು ಮಾಡಿದ್ದಾರೆ. ಈ ಹಿಂದೆ ಯಾವ ಸರ್ಕಾರವೂ ಇಂತಹ ಕಠಿಣ ಕ್ರಮ ಕೈಗೊಂಡಿರಲಿಲ್ಲ, ಎಂಇಎಸ್ ನಿμÉೀಧ ಮಾಡಲು ಕಾನೂನು ಚೌಕಟ್ಟಿನಲ್ಲಿ ನಿರ್ಧಾರ ಮಾಡಬೇಕು ಬೇಕಿದ್ದರೆ ಎಲ್ಲರೂ ರಾಜ್ಯದ ಸಂಸದರ ಮನೆ ಮುಂದೆ ಧರಣಿಗೆ ಕೂರೋಣ ಬಂದ್ ಬಿಟ್ಟು ಬೇರೆ ರೀತಿ ಸರ್ಕಾರದ ಮೇಲೆ ಒತ್ತಡ ಹೇರೋಣ ಎಂದರು.ಈ ವೇಳೆ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಮಾತನಾಡಿ ಪದೇ ಪದೇ ಬಂದ್ ಮಾಡುವುದರಿಂದ ರಾಜ್ಯದ ಜನತೆ ಮೇಲೆ ಪರಿಣಾಮ ಬೀಳುತ್ತದೆ. ಹೀಗಾಗಿ ಬಂದ್‍ಗೆ ಟಿ.ಎ.ನಾರಾಯಣಗೌಡ ಅವರು ಯಾವುದೇ ರೀತಿ ಬೆಂಬಲ ಸೂಚಿಸಿಲ್ಲ. ಆದರೆ ಡಿ.30ರಂದು ರಾಜಭವನಕ್ಕೆ ಮುತ್ತಿಗೆ ಹಾಕಲು ರಾಜ್ಯದ ಎಲ್ಲಾ ತಾಲೂಕುಗಳಿಂದ ಹೋಗಿ ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಆಗ್ರಹಿಸುತ್ತೇವೆ ಎಂದರು