Breaking News

ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಗೈರಾಗಿ ದೆಹಲಿಗೆ ಹಾರಿದ ರಮೇಶ್ ಜಾರಕಿಹೊಳಿ;

Spread the love

ಹುಬ್ಬಳ್ಳಿ: ಪಕ್ಷದ ಸಂಘಟನೆ, ಮುಂಬರುವ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗುತ್ತೆ. ಕಾರ್ಯಕಾರಣಿಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತೆ. ಸಂಪುಟ ವಿಸ್ತರಣೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಕಾರ್ಯಕಾರಣಿ ಅಜೆಂಡಾ ಬಗ್ಗೆ ಪಕ್ಷ ಹೇಳುತ್ತೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸಿಎಂ ವಿಶ್ರಾಂತಿ ಪಡೆದು ಕೆಲಸ‌ ಮಾಡಲಿ ಎನ್ನೋ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎಂ.ಪಿ ಕುಮಾರಸ್ವಾಮಿಗೆ ನನ್ಮೇಲೆ ಬಹಳ ಪ್ರೀತಿ ಇದೆ. ವರ್ಷಪೂತಿ ದಿನಾಲು 15 ಗಂಟೆ ಕೆಲಸ ಮಾಡೊ ಸಂಕಲ್ಪ ಮಾಡಿದ್ದಿನಿ. 2023 ಕ್ಕೆ ಬಿಜೆಪಿ ಅಧಿಕಾರಕ್ಕೆ ತರೋದೆ ನನ್ನ ಗುರಿ. ಈಗಿನಿಂದಲೇ ಅದನ್ನ ಸ್ಟಾಟ್೯ ಮಾಡ್ತಿನಿ. ಅರುಣ್ ಸಿಂಗ್ ಸೇರಿದಂತೆ ಕೇಂದ್ರ ವರಿಷ್ಟರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ‌. ಅವರಿಗೆ ಅದಕ್ಕಾಗಿ ಧನ್ಯವಾದ ಹೇಳ್ತೆನೆ. ನಾವೆಲ್ಲಾ ಸೇರಿ ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೆವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಸರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾರ್ಯಕಾರಿಣಿಯಲ್ಲಿ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. 365 ದಿನವೂ ದಣಿವರಿಯದೆ ಕೆಲಸ ಮಾಡುವ ಶಕ್ತಿ ಇದೆ. ಪ್ರತಿ ದಿನ 15 ಗಂಟೆಗಳ ಕಾಲ ಕೆಲಸ ಮಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಸಂತೃಪ್ತಿ ತಂದಿದೆ: ಅರುಣ್ ಸಿಂಗ್
ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಇದು ಕಾಂಗ್ರೆಸ್‌ನವರು ಸೃಷ್ಟಿ ಮಾಡಿರುವಂತಹ ಭ್ರಮೆ ಅಷ್ಟೇ ಎಂದು ಟಿವಿ9ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಸಂತೃಪ್ತಿ ತಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳ ಸಜ್ಜನ ವ್ಯಕ್ತಿ. ರೈತರಿಗೆ, ರೈತರ ಮಕ್ಕಳಿಗೆ ನೇರವಾಗಿ ಅವರ ಖಾತೆಗೆ ಹಣ ಹಾಕಲಾಗುತ್ತದೆ. ಬಡವರಿಗೆ ಮನೆ ನಿರ್ಮಾಣ, ಪ್ರವಾಹ ಪರಿಸ್ಥಿತಿ ನಿರ್ವಹಣೆ, ಖುದ್ದಾಗಿ ಸಿಎಂ ನಿರ್ವಹಣೆ ಮಾಡಿದ ಕಾರ್ಯ ಪ್ರಶಂಸನೀಯ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಿಂದ ಮುಳುಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅಪ್ಪಟ ಹಿಂದೂ ವಿರೋಧಿ. ಕುತಂತ್ರ, ಸಿಡಿ ತಯಾರು ಮಾಡೋದು ಕಾಂಗ್ರೆಸ್ ಕೆಲಸ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಟಿವಿ9ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಗೈರಾಗಿ ದೆಹಲಿಗೆ ಪ್ರಯಾಣ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಗೈರಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಿದ್ದಾರೆ. ಸಭೆಯಲ್ಲಿ ಬೆಳಗಾವಿ ಪರಿಷತ್ ಸೋಲಿನ ಬಗ್ಗೆ ಚರ್ಚೆ ಸಾಧ್ಯತೆ ಹಿನ್ನೆಲೆ ಏಕಾಂಗಿಯಾಗಿ ದೆಹಲಿಗೆ ತೆರಳಿದ್ದಾರೆ. ಸೋಲಿನ ಪರಾಮರ್ಶೆಯ ಬಗ್ಗೆ ಸಮಿತಿ ರಚಿಸುವುದಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ ಹೇಳ್ತಿದ್ದಂತೆ ರಾಜ್ಯ ಉಸ್ತುವಾರಿ ಆಗಮಿಸಿದ್ರೂ ಭೇಟಿ ಆಗದ ಶಾಸಕ ರಮೇಶ್‌ ನವದೆಹಲಿಗೆ ತೆರಳಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನ ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ