ವಿಧಾನಸಭಾ ಚುನಾವಣೆಗೆ ಅಬ್ಬಬ್ಬಾ ಅಂದ್ರೆ ಒಂದು ವರ್ಷ ಇದೆ. ಪಕ್ಷಗಳು ಈಗಾಗಲೇ ಚುನಾವಣೆಗೆ ತಯಾರಿ ನಡೆಸ್ತಿವೆ. ಈ ನಡುವೆ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಎಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡೇ ನೂತನ ಐಡಿಯಾವೊಂದನ್ನು ಜಾರಿಗೊಳಿಸಲು ಪ್ಲಾನ್ ಮಾಡಿದೆ.
ಒಂದೆಡೆ ಸಿಎಂ ಬದಲಾವಣೆ ಚರ್ಚೆ, ಮತ್ತೊಂದೆಡೆ ಎಲೆಕ್ಷನ್ ಕ್ಯಾಬಿನೆಟ್ ರಚನೆಗೆ ತಯಾರಿ.. ಕ್ಯಾಬಿನೆಟ್ಗೆ ಸರ್ಜರಿ ನಡೆಯೋದಾದ್ರೆ ನಮ್ಗೂ ಸಚಿವ ಸ್ಥಾನ ಬೇಕು ಅನ್ನೋ ಲಾಬಿ ಶುರುವಾಗಿದೆ. ಇನ್ನು ಒಂದೆರಡು ತಿಂಗಳಲ್ಲಿ ಚುನಾವಣೆಗಾಗಿ ಕ್ಯಾಬಿನೆಟ್ ರಚನೆ ಮಾಡೋ ಸಾಧ್ಯತೆ ಇದ್ದು, ಆಕಾಂಕ್ಷಿಗಳು ತೆರೆಮರೆಯಲ್ಲಿ ಸಚಿವ ಸ್ಥಾನಕ್ಕಾಗಿ ಸರ್ಕಸ್ ನಡೆಸ್ತಿದ್ದಾರೆ.
ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ ಆಕಾಂಕ್ಷಿಗಳು..!
ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಕ್ಯಾಬಿನೆಟ್ ಪುನಾರಚನೆಗೆ ಮುಂದಾಗಿದ್ದು, ಹಿರಿಯರಿಗೆ ಕೊಕ್ ಕೊಡೋ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ತೆರವಾಗೋ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಲಿಸ್ಟ್ ಕೂಡಾ ಬೆಳೀತಾ ಇದೆ. 20ಕ್ಕೂ ಹೆಚ್ಚು ಆಕಾಂಕ್ಷಿಗಳು ಬೊಮ್ಮಾಯಿ ಕ್ಯಾಬಿನೆಟ್ ಸೇರಲು ಕಸರತ್ತು ಆರಂಭಿಸಿದ್ದಾರೆ.
ಲಖನ್ ಜಾರಕಿಹೊಳಿ ಬಿಜೆಪಿ ಸೇರಿಸಲು ಸಾಹುಕಾರ್ ಪ್ಲಾನ್
ಬಿಜೆಪಿ ಸೇರೋದಕ್ಕೆ ಜಾರಕಿಹೊಳಿ ಸಹೋದರರ ಷರತ್ತು..!
ಮತ್ತೊಂದೆಡೆ ಲಖನ್ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆ ಮಾಡಲು ರಮೇಶ್ ಜಾರಕಿಹೊಳಿ ಪ್ಲಾನ್ ಮಾಡ್ತಿದ್ದಾರೆ. ಪರಿಷತ್ನಲ್ಲಿ ಬಹುಮತಕ್ಕೆ ಬಿಜೆಪಿಗೆ ಒಂದು ಸೀಟ್ ಕೊರತೆ ಇದ್ದು ಲಖನ್ ಸೇರ್ಪಡೆಯೊಂದಿಗೆ ಬಿಜೆಪಿಗೆ ಬಹುಮತ ಬರಲಿದೆ. ಅದ್ರೆ ಲಖನ್ ಬಿಜೆಪಿ ಸೇರ್ಪಡೆಯಾಗಬೇಕಾದರೆ ಜಾರಕಿಹೊಳಿ ಸಹೋದರರು ಕೆಲ ಕಂಡೀಷನ್ ಮುಂದಿಟ್ಟಿದ್ದಾರೆ.