ಹೀಗಾಗಿ ನಮಗೆ ಜೀವಭಯ ಇದೆ ರಕ್ಷಣೆ ಕೊಡಿ ಅಂತ ಈ ಜೋಡಿ ಈಗ ಪೊಲೀಸರ ಮೊರೆಹೋಗಿದ್ದಾರೆ.
ಎಸ್ಪಿ ಎದುರು ನಮಗೆ ರಕ್ಷಣೆ ಕೊಡಿ ಅಂತ ಮೊರೆ ಹೋಗಿರುವ ನವ ಜೋಡಿಗಳು, ನಮಗೆ ಜೀವಭಯ ಇದೆ. ನಾವು ಅಂತರ್ಜಾತಿ ವಿವಾಹವಾಗಿದ್ದೇವೆ. ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ. ನಾವು ಪ್ರೀತಿಸಿ ಮದುವೆಯಾಗಿದ್ದೇವೆ ಅಂತ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸುತ್ತಿರೋ ಜೋಡಿಹಕ್ಕಿಗಳು. ಇದೆಲ್ಲಾ ನಡೆದಿರೋದು ವಿಜಯನಗರ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಪಾವನಾಪುರದ ಯುವಕ ಕಿರಣ್ ಮತ್ತು ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ಯುವತಿ ಸೌಮ್ಯಾ ಪಿಎನ್ ಇಬ್ಬರಿಗೂ ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಎಂಜನಿಯರಿಂಗ್ ಮಾಡುವ ವೇಳೆ ಪ್ರೇಮಾಂಕುರವಾಗಿತ್ತು. ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಅವರ ಮನೆಗಳಲ್ಲಿ ಗೊತ್ತಾಗಿದೆ.
ನಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಆ ಕಾರಣಕ್ಕೆ ಇಬ್ಬರನ್ನು ಬೇರ್ಪಡಿಸೋ ಪ್ರಯತ್ನ ಮಾಡಿದ್ದಾರೆ. ಕಾನೂನು ಪ್ರಕಾರ ನಾವು ಮದುವೆಯಾಗಿದ್ದೇವೆ. ಆದ್ರೆ ನಮಗೆ ನೆಮ್ಮದಿಯಾಗಿ ಇರೋದಕ್ಕೆ ನಮ್ಮ ಮನೆಯವರು ಬಿಡ್ತಿಲ್ಲ. ಹೀಗಾಗಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗೋಕೆ ನಿರ್ಧರಿಸಿದೆವು ಎಂದು ಈ ಜೋಡಿ ಹಕ್ಕಿಗಳು ಹೇಳುತ್ತಾರೆ..