ಕಾನ್ ಪುರದ ಉದ್ಯಮಿಯೊಬ್ಬರ ಮನೆಯಲ್ಲಿ 150 ಕೋಟಿ ರೂ. ಕ್ಯಾಷ್ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ನಗದು ಪತ್ತೆಯಾಗಿದೆ.
ಎರಡು ವಾರ್ಡ್ ರೂಬ್ ತುಂಬ ಕಂತೆ ಕಂತೆ ನೋಟುಗಳನ್ನು ಜೋಡಿಸಿನ ಇಡಲಾಗಿತ್ತು.
ಇದರ ಜೊತೆಗೆ ತಲೆದಿಂಬಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ನೋಟುಗಳನ್ನು ಸುತ್ತಿಡಲಾಗಿತ್ತು.

ತೆರಿಗೆ ವಂಚನೆ ಆರೋಪದ ಮೇಲೆ ಜಿಎಸ್ ಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು. ಅಪಾರ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ತೆರಿಗೆ ಅಧಿಕಾರಿಗಳು ಆಗಮಿಸಿದರು.
ಉತ್ತರಪ್ರದೇಶದ ಕಾನ್ ಪುರ, ಮುಂಬೈ, ಗುಜರಾತ್ ನ ನಾನಾ ಕಡೆ ದಾಳಿ ನಡೆಸಲಾಯಿತು.
Laxmi News 24×7