Breaking News

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬೆಳಗಾವಿ ಬಸ್ ನಿಲ್ದಾಣದ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದ ಉತ್ತರ ಶಾಸಕ ಅನಿಲ ಬೆನಕೆ

Spread the love

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ಉತ್ತರ ಶಾಸಕ ಅನಿಲ್ ಬೆನಕೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಈ ಬಸ್ ಸ್ಟಾಂಡ್ ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಬೆಳಗಾವಿಯ ಸುವರ್ಣಸೌಧದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಅನಿಲ್ ಬೆನಕೆ ಅವರು 2017ರಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದೆ. 2 ವರ್ಷದ ಅವಧಿಯಲ್ಲಿ ಮುಗಿಸಬೇಕು ಅಂತಾ ಇತ್ತು. ಆದರೆ ಎರಡು ವರ್ಷ ವಿಳಂಬವಾಗಿದೆ. ಹೀಗಾಗಿ ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ಅವರು ಸರ್ಕಾರಕ್ಕೆ ಶಾಸಕರಿಗೆ ಮಿಸ್ ಗೈಡ್ ಮಾಡುವ ಅನಿವಾರ್ಯತೆ ಏನೂ ಉದ್ಭವಿಸಿಲ್ಲ. 2017 ಫೆಬ್ರವರಿಯಲ್ಲಿ ವರ್ಕ ಆರ್ಡರ್ ಕೊಟ್ಟಿದ್ದೇವು. 2019 ನವೆಂಬರ್‍ನಲ್ಲಿ ಕಾಮಗಾರಿ ಪೂರ್ಣವಾಗಬೇಕು. ಆದರೆ ಕೋವಿಡ್ ಹಿನ್ನೆಲೆ ಕೆಲಸಕ್ಕೆ ಕೆಲಸಗಾರರು ಬರಲಿಲ್ಲ, ಗುತ್ತಿಗೆ ಹಿಡಿದನಿಗೆ ತೊಂದರೆ ಆಯಿತು. ಅದೇ ರೀತಿ ಎರಡು ವರ್ಷ ಭಾರಿ ಮಳೆಯಾಗಿದ್ದರಿಂದ ಕೆಲಸ ಮಾಡಲು ತೊಂದರೆ ಆಗಿತ್ತು. ಹೀಗಾಗಿ ವಿಳಂಬವಾಗಿದೆ 2 ವರ್ಷಗಳ ಕಾಲ ಹೆಚ್ಚುವರಿಯಾಗಿ ಕಾಲಾವಕಾಶ ಕೊಟ್ಟಿದ್ದೇವೆ, ನಿಗದಿತ ಸಮಯದಲ್ಲಿ ಮುಗಿಸುತ್ತೇವೆ ಎಂದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ