ಸ್ಮಾರ್ಟ ಬೆಳಗಾವಿಯನ್ನು ಇನ್ನಷ್ಟು ಸ್ಮಾರ್ಟ ಮಾಡಿದ ಹಿರಿಯರು, ನನ್ನ ಮಾರ್ಗದರ್ಶಕರು, ನನಗೆ ಯಾವತ್ತೂ ಅಭಯ ಅಣ್ಣ ಪಾಟೀಲ್ ಅವರು ಆದರ್ಶ ಎನ್ನುವ ಮೂಲಕ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ್ ಪಾಟೀಲ್‍ರನ್ನು ಹಾಡಿ ಹೊಗಳಿದರು.
ಬೆಳಗಾವಿಯ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೊಸಿಯೇಷನ್ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ದೇಶ, ರಾಜ್ಯ, ಜಿಲ್ಲೆ ಕಟ್ಟಬೇಕು ಎಂದರೆ ಮೊದಲ ಹೆಜ್ಜೆ ಇಟ್ಟವರು ಯಾರಾದ್ರೂ ಇದ್ದರೆ ಅದು ಸಿವಿಲ್ ಇಂಜಿನಿಯರ್‍ಗಳು. ಎಂತಹ ಸೇತುವೆ, ಪಾರ್ಲಿಮೆಂಟ್, ವಿಧಾನಸೌಧ, ಸುವರ್ಣಸೌಧ, ಬೆಳಗಾವಿ ಕಟ್ಟಿದ್ದಿರಿ, ನಮ್ಮ ಮನೆಯನ್ನು ಕೂಡ ನೀವೆ ಕಟ್ಟಿದ್ದಿರಿ. ನೀವು ಇಲ್ಲದೇ ನಮ್ಮ ದೇಶ ಇಷ್ಟು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯನೇ ಇರಲಿಲ್ಲ. ನಿಮ್ಮ ಬಗ್ಗೆ ನಮಗೆ ಸಾಕಷ್ಟು ಗೌರವವಿದೆ. ಅಭಯ್ ಪಾಟೀಲ್ ಅಣ್ಣನವರು ಸಿಎ ಸೈಟ್ ತೆಗೆದುಕೊಂಡು ಆಫೀಸ್ ಕಟ್ಟಲು 10 ಲಕ್ಷ ಕೊಡುತ್ತೇನೆ ಎಂದಿದ್ದಾರೆ. ನನ್ನ ಕ್ಷೇತ್ರದಲ್ಲಿ ನೀವು ಸಿಎ ಸೈಟ್ ಆಫೀಸ್ ಕಟ್ಟಲು ಮುಂದಾದ್ರೆ ನಾನು 10 ಲಕ್ಷ ಕೊಡಲ್ಲ 9 ಲಕ್ಷ ರೂಪಾಯಿ ಕೊಡುತ್ತೇನೆ. ಯಾಕೆಂದರೆ ಅಭಯ್ ಅಣ್ಣನಗಿಂತ ನಾನು ಚಿಕ್ಕವಳು ಎಂದು ಹಾಸ್ಯ ಚಟಾಕಿ ಹಾರಿಸಿದರು.