Breaking News

ಅಂಬ್ಯುಲೆನ್ಸ್ ನಲ್ಲಿ ಚಿನ್ನದ ಗಣಿ ಕಾರ್ಮಿಕರ ಓಡಾಟ

Spread the love

ರಾಯಚೂರು: ಲಿಂಗಸುಗೂರಿನ ಹಟ್ಟಿ ಚಿನ್ನದ ಗಣಿಯಿಂದ ದೇವದುರ್ಗದ ಊಟಿ ಚಿನ್ನದ ಗಣಿಗೆ ಕೆಲಸಕ್ಕಾಗಿ ಕಾರ್ಮಿಕರನ್ನ ಅಂಬ್ಯುಲೆನ್ಸ್‍ನಲ್ಲಿ ನಿತ್ಯ ಕರೆದ್ಯೊಯ್ಯಲಾಗುತ್ತಿದೆ. ಅಂಬ್ಯುಲೆನ್ಸ್ ಪದೇ ಪದೇ ಓಡಾಡುವುದನ್ನ ಗಮನಿಸಿ ಅನುಮಾನಗೊಂಡ ದೇವದುರ್ಗ ತಾಲೂಕಿನ ವಂದಲಿ ಗ್ರಾಮಧ ಜನ ಅಂಬ್ಯುಲೆನ್ಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿಗಳನ್ನ ಸಾಗಿಸಲು ಎಷ್ಟು ಬಾರಿ ನಿಲ್ಲಿಸಲು ಯತ್ನಿಸಿದರು ನಿಲ್ಲದ ಅಂಬ್ಯುಲೆನ್ಸ್ ನಿಯಮ ಬಾಹಿರವಾಗಿ ಕಾರ್ಮಿಕರನ್ನ ಸಾಗಣೆ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗ್ರಾಮೀಣ ರಸ್ತೆಯಲ್ಲಿ ಸೈರನ್ ಹಾಕಿಕೊಂಡು ಅತೀ ವೇಗವಾಗಿ ನಿತ್ಯ ಅಂಬ್ಯುಲೆನ್ಸ್ ಓಡಾಡುತ್ತಿವೆ.

ಮೂರು ಪಾಳೆಯದ ಕಾರ್ಮಿಕರನ್ನೂ ಅಂಬ್ಯುಲೆನ್ಸ್ ನಲ್ಲೇ ಸಾಗಣೆ ಮಾಡಲಾಗುತ್ತಿದೆ. ಕೋವಿಡ್ ನಿಯಮಗಳನ್ನ ಮೀರಿ ಅಂಬ್ಯುಲೆನ್ಸ್ ನಲ್ಲಿ ಕಾರ್ಮಿಕರನ್ನ ತುಂಬಿಕೊಂಡು ಸಾಗಣೆ ಮಾಡುವುದು ಸರಿಯಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ – ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಯಾಕೆ ಹೀಗಾಗುತ್ತೆ: ಜೋಶಿ ಪ್ರಶ್ನೆ

Spread the loveರಾಯಚೂರು: ಬಾಗಲಕೋಟೆಯಲ್ಲಿ  ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ  ನಡೆದಿದೆ. ನಿಮ್ಮ ಸರ್ಕಾರ ಬಂದಾಗಲೇ ಯಾಕೇ ಹೀಗಾಗುತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ