ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡ ಧ್ವಜವನ್ನು ಸುಟ್ಟು ಮರಾಠಾ ಪುಂಡರು ಉದ್ಧಟತನ ಮೆರೆದಿದ್ದಾರೆ. ಕನ್ನಡ ಬಾವುಟದ ಮೇಲೆ ನಾಯಿ ಕೂರಿಸಿ, ಚಪ್ಪಲಿ ಇಟ್ಟು ವಿಕೃತಿ ಪ್ರದರ್ಶನ ಮಾಡಿದ್ದಾರೆ.
ಹೌದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮರಾಠಾ ಪುಂಡರ ಉದ್ಧಟತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿವಸೇನೆ ಪುಂಡರಿಗೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಾಥ್ ನೀಡಿದ್ದಾರೆ. ಕನ್ನಡ ಧ್ವಜದ ಮೇಲೆ ನಾಯಿ ಕೂರಿಸಿ, ಚಪ್ಪಲಿ ಇಟ್ಟು ಇಟ್ಟು ಬಳಿಕ, ಧ್ವಜವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರು ಮತ್ತಷ್ಟು ಕೆರಳುವಂತೆ ಮಾಡಿದ್ದಾರೆ.