ಬಿಜೆಪಿಯವರು ಜನರ ಮನಸನ್ನು ಬೇರೆಡೆಗೆ ತಿರುಗಿಸಲು ಮತಾಂತರ ನಿಷೇಧ ಕಾಯ್ದೆಯಂತಹ ಕಾನೂನುಗಳನ್ನು ತರುವ ಹುನ್ನಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಬಿಜೆಪಿ ಸರಕಾರದ ನಡೆಯನ್ನು ಕುರಿತಂತೆ ಮಾಧಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಈ ರೀತಯ ಪ್ರಯತ್ನಗಳನ್ನು ಮಾಡುತ್ತಿದೆ. ಇದು ಅಗತ್ಯವಿದೆಯಾ ಎಂದು ಪ್ರಶ್ನೆ ಮಾಡಿದರು. ಇನ್ನು ಬಲಾತ್ಕಾರವಾಗಿ ಮತಾಂತರ ಮಾಡುತ್ತಿದ್ದರೆ ಕಂಪ್ಲೆAಟ್ ಕೊಡಲಿ, ಅವರನ್ನು ಶಿಕೆಗೆ ಗುರಿಪಡಿಸಲಿ. ಗೂಳಿಹಟ್ಟಿ ಶೇಖರ್ ಅದೇನೋ ಮಾಡಿದರು ಅಂತಾ ಕಂಪ್ಲೆAಟ್ ಕೊಟ್ಟಿದಾನಾ, ಅವರ ತಾಯಿ ಕಂಪ್ಲೆAಟ್ ಕೊಟ್ರಾ ಎಂದು ಪ್ರಶ್ನೆ ಮಾಡಿದ್ರು. ಇನ್ನು ಲವ್ ಜೀಹಾದ್ ಹಾಗೂ ಮತಾಂತರ ನಿಷೇಧ ಕಾಯ್ದೆ ಇವೆಲ್ಲ ಜನರ ಭಾವನಾತ್ಮಕ ವಿಷಯಗಳಿಗೆ ಸಂಬAಧಪಟ್ಟವು. ಹಾಗಾಗಿ ಬಿಜೆಪಿ ಇವುಗಳನ್ನೇ ಅಂಜೆAಡಾ ಮಾಡಿಕೊಂಡಿದೆ ಎಂದರು.
ಇನ್ನು ಪರಿಷತ್ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಕಾಂಗ್ರೆಸ್‌ಗೆ ತೋರಿದ ಬೆಂಬಲ ಕುರಿತಂತೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ನಾವೂ ಗೆದ್ದಿರಬಹುದು, ಅವರೂ ಗೆದ್ದಿರಬಹುದು. ಆದರೆ ಒಟ್ಟು ೯೪ ಸಾವಿರ ಮತಗಳಲ್ಲಿ ೪೪ಸಾವಿರಕ್ಕೂ ಅಧಿಕ ಮತಗಳು ನಮಗೆ ಬಂದಿವೆ. ಬಿಜೆಪಿಯವರಿಗೆ ೩೪ಸಾವಿರ ಹಾಗೂ ಜೆಡಿಎಸ್‌ನವರಿಗೆ ೧೦ಸಾವಿರ ಮತಗಳು ಬಂದಿವೆ. ಇದು ಏನನ್ನು ಸೂಚಿಸುತ್ತೆ ಗೊತ್ತಾ. ಜನ ಕಾಂಗ್ರೆಸ್ ಆಡಳಿತಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ. ಈಗ ಮತ ಹಾಕಿದವರೆಲ್ಲ ಚುನಾಯಿತ ಪ್ರತಿನಿಧಿಗಳು. ಹಾಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಇಜ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಜನ ಬಯಸುತ್ತಿದ್ದಾರೆ ಎಂದರು.
ಇನ್ನು ಬಿಜೆಪಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಇನ್ನಿಲ್ಲದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹಾಗಾಗಿ ಕಾಂಗ್ರೆಸ ಹೇಗಾದರೂ ಮಾಡಿ ಈ ಕಾಯ್ದೆಯನ್ನು ಜಾರಿಗೆ ಬಾರದಂತೆ ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನು ಸದನದಲ್ಲಿ ಈ ಕುರಿತಂತೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.