Breaking News

ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ ಎಷ್ಟು? ಕೇಳಿದರೆ ಶಾಕ್ ಆಗ್ತೀರಿ

Spread the love

ಬೆಳಗಾವಿ – ಬಿಳಿ ಆನೆಯಂತಾಗಿರುವ ಬೆಳಗಾವಿಯ ಸುವರ್ಣ ವಿಧಾನಸೌಧ ಕಳೆದ 3 ವರ್ಷದಲ್ಲಿ ಸರಿಯಾಗಿ ಬಳಕೆಯೇ ಆಗಿಲ್ಲ. ಈಗ 10 ದಿನಗಳ ಅಧಿವೇಶನ ನಡೆಯುತ್ತಿದೆ. ಈಚೆಗೆ ಕೆಲವು ಕಚೇರಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.

ಆದರೆ ಸುವರ್ಣ ವಿಧಾನಸೌಧದ ನಿರ್ವಹಣೆ ವೆಚ್ಚ ಮಾತ್ರ ನಿಂತಿಲ್ಲ. ಈ ಪೈಕಿ ವಿದ್ಯುತ್ ಬಿಲ್ ಕೇಳಿದರೆ ಎಂತವರೂ ಶಾಕ್ ಆಗೋದು ಗ್ಯಾರಂಟಿ.

ಜನೆವರಿ 1, 2018ರಿಂದ ನವೆಂಬರ್ 15, 2021ರ ವರಗೆ  ಕೇವಲ ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ 1,17,91,558ರೂ.

ವಿಧಾನಸಭೆಯಲ್ಲಿ ಬಿಜೆಪಿಯ ಅಭಿಯ ಪಾಟೀಲ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಈ ಉತ್ತರ ನೀಡಿದ್ದು, ಶೀಘ್ರವೇ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ