ಬೆಳಗಾವಿ: ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡ ಅಭ್ಯರ್ಥಿಗಳ ಸಕ್ಷಮ ಪ್ರಾಧಿಕಾರದಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ನೆಡೆಸಿ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸದಸ್ಯ ಅ.ದೇವೆಗೌಡ ಅವರ ಪ್ರಶ್ನೆಗೆ ಮೇಲ್ಮನೆಯಲ್ಲಿ ಉತ್ತರಿಸಿದ ಅವರು 2017-18ರಲ್ಲಿ ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಕೆ.ಪಿ.ಎಸ್.ಸಿ. ಅಂತಿಮ ಆಯ್ಕೆ ಪಟ್ಟಿಯನ್ನು ಸಕ್ಷಮ ಪ್ರಾಧಿಪಾರಗಳಿಗೆ ಕಳುಹಿಸಿದೆ.
ಸಂಬಂಧಪಟ್ಟ ಪ್ರಾಧಿಕಾರಿಗಳು ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ, ಸಿಂಧುತ್ವ ಪ್ರಮಾಣಪತ್ರ ಇತ್ಯಾದಿ ಪರಿಶೀಲನಾ ಕಾರ್ಯ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿ ಆದೇಶ ನೀಡುತ್ತವೆ ಎಂದು ಉತ್ತರಿಸಿದ್ದಾರೆ.
Laxmi News 24×7