Breaking News

ವಿಜಯಪುರ ನಗರದಲ್ಲಿ ಇತ್ತಿಚೆಗೆ ನಡೆಯತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳನ್ನು ವಿಜಯಪುರ ಪೊಲೀಸರು ಬೇಧಿಸುವಲ್ಲಿ ಯಶಸ್ವಿ

Spread the love

ವಿಜಯಪುರ ನಗರದಲ್ಲಿ ಇತ್ತಿಚೆಗೆ ನಡೆಯತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳನ್ನು ವಿಜಯಪುರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಜನ ಕಳ್ಳರನ್ನು ಬಂಧಿಸಿದ್ದಾರೆ. ‌ಅವರಿಂದ ಒಟ್ಟು 7 ಲಕ್ಷ ಮೌಲ್ಯದ 11 ಎಮ್ಮೆ ಮತ್ತು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಜಯಪುರ ನಗರದ ಹೊರವಲಯದ ಬೇಗಳ ತಲಾಬ್ ದೊಡ್ಡಿ ನಿವಾಸಿಗಳಾದ ಶ್ರೀಕಾಂತ ತಂದೆ ಲಕ್ಷ್ಮಣ @ ಅಂಕುಶ ಗೋಪಣೆ, ಮೈಲಾರಿ ತಂದೆ ಲಕ್ಷ್ಮಣ @ ಅಂಕುಶ ಗೋಪಣೆ, ರಾಮು ತಂದೆ ತಾಯಪ್ಪ ಗೋಪಣೆ, ಬೀಮು @ ಭೀಮಾ ತಂತೆ ಅಂಬು @ ಅಂಬಾಜಿ ಗೋಪನೆ, ಹಾಗೂ ಬೀಮಶಿ @ ಭೀಮಸೇನ ತಂದೆ ಶಂಕರ ಗೋಪಣೆ, ಮಾರುತಿ ತಂದೆ ಅಣ್ಣಪ್ಪ್ಪ ಗೋಪಣೆ ಇವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಈ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಡಾ| ರಾಮ್ ಎಲ್. ಅರಸಿದ್ದಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ, ಕೆ.ಸಿ.ಲಕ್ಷ್ಮೀನಾರಾಯಣ, ಪೊಲೀಸ್ ಉಪ-ಅಧೀಕ್ಷಕರು ವಿಜಯಪುರ ರವರ ಹಾಗೂ ರಮೇಶ ಅವಜಿ, ಸಿಪಿಐ ಗೋಲಗುಮ್ಮಜ ವೃತ್ತ ರವರ ನೇತೃತ್ವದಲ್ಲಿ, ಒಂದು ವಿಷೇಷ ತನಿಖಾ ತಂಡವನ್ನು ರಚಿಸಲಾಗಿತ್ತು.‌ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ ಪಿ‌.ಆನಂದಕುಮಾರ ಬಹುಮಾನ ಘೋಷಿಸಿದ್ದಾರೆ.

Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ