Breaking News

ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ

Spread the love

ಮೈಸೂರು: ಪ್ರತಿಷ್ಠಿತ ಕೆ ಎಂ ಎಫ್ ಕಂಪನಿಯ ನಂದಿನಿ ತುಪ್ಪದ ಹೆಸರಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಮೇಲೆ ಪೊಲಿಸರು ದಾಳಿ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಚಾಮುಂಡಿ ಬೆಟ್ಟದ ಹಿಂಭಾಗ ಹೊಸಹುಂಡಿ ಗ್ರಾಮದಲ್ಲಿ ಗೌಡನ್ ನಲ್ಲಿ ಟನ್ ಗಟ್ಟಲೆ ನಕಲಿ ತುಪ್ಪ ಹಾಗೂ ಲೇಬಲ್ ಗಳ ಮುದ್ರಣ ಘಟಕ ಪತ್ತೆಯಾಗಿದೆ. ನಂದಿನಿ ತುಪ್ಪಕ್ಕೆ ಡಾಲ್ಡಾ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಇದಾಗಿದ್ದು, ಜಿವನ್ ತುಪ್ಪದ ಕಂಪನಿಯಿಂದ ಈ ಜಾಲ ಸಿಕ್ಕಿಬಿದ್ದಿದೆ. ನಂದಿನಿ ತುಪ್ಪದಂತೆ ಕಾಣಲು ಡಾಲ್ಡಾ ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಿ ಮೈಸೂರು ನಗರದಾದ್ಯಂತ ವಿತರಣೆ ಮಾಡಲಾಗುತ್ತಿತ್ತು. ಕಳೆದ ನಾಲ್ಕು ತಿಂಗಳಿಂದ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ.

ನಂದಿನಿ ತುಪ್ಪ ಖರೀದಿ ಮಾಡುತ್ತಿದ್ದ ಚಂದ್ರು ಜಾಲದ ರೂವಾರಿ. ಸ್ಥಳಕ್ಕೆ ಮೈಮುಲ್ ಎಂ.ಡಿ ವಿಜಯ್ ಕುಮಾರ್ ಹಾಗೂ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

Spread the loveಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ