Breaking News

ಕೋಟ್ಯಾಂತರ ರೂ. ಅವ್ಯವಹಾರ ಮಾಡಿದ ಶಿವಸಾಗರ ಶುಗರ್ಸ್‌ ಕಂಪನಿ : ಮಾಜಿ ನಿರ್ದೇಶಕರು ಆರೋಪ

Spread the love

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದುಪುಡಿಯ ಶಿವಸಾಗರ ಶುಗರ್ಸ್‌ ಆ್ಯಂಡ್ ಅಗ್ರೋ ಪ್ರೊಡಕ್ಟ್ ಕಂಪನಿಯ ಅಕ್ರಮ ವ್ಯವಹಾರಗಳ ಹಿನ್ನೆಲೆಯಲ್ಲಿ, ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಸೇರಿದಂತೆ ನಿರ್ದೇಶಕರು ಬೇಕಾಬಿಟ್ಟಿಯಾಗಿ, ನಕಲಿ ದಾಖಲೆ ಸೃಷ್ಟಿ ಮಾಡಿ, ಭಾರಿ ಅವವ್ಯಹಾರ ಮಾಡದ್ದಾರೆಂದು ಈಗ ಕಂಪನಿಯ ಮಾಜಿ ನಿರ್ದೇಶಕರು, ಆನಂದ ಕುಲಕರ್ಣಿ ಅವರು ಆರೋಪಿಸಿದ್ದಾರೆ

ನಗರದಲ್ಲಿ ಇಂದು ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು ರಾಜೇಂದ್ರ ಪಾಟೀಲ ಸೇರಿದಂತೆ ಏಳು ಜನರು ಶಿವಸಾಗರ ಶುಗರ್ಸ್‌ ಆ್ಯಂಡ್‌ ಅಗ್ರೋ ಪ್ರೊಡಕ್ಟ್ ಕಂಪನಿಗೆ 40 ಸಾವಿರದಷ್ಟು ಷೇರುದಾರರಿದ್ದು, ಇವರೆಲ್ಲರನ್ನು ನಿರ್ಲಕ್ಷಿಸಿ ಸರ್ವ ಸಾಧರಣ ಸಭೆ ಕರೆಯದೆ ಸರ್ವಾಧಿಕಾರದಿಂದ ವರ್ತಿಸಿದ್ದಾರಂತೆ, ಅಲ್ಲದೆ 2014ರ ಫೆ. 14 ರಂದು ನಕಲಿ ದಾಖಲೆ ಸೃಷ್ಟಿ ಮಾಡಿ 10 ಜನ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿದ್ದರು.

ಕಾರ್ಖಾನೆಯ ಆರಂಭಕ್ಕೆ ವಿವಿಧ ಬ್ಯಾಂಕುಗಳಿಂದ ಸಾಲ ಪಡೆಯಲಾಗಿದ್ದು, ಸಾಲದ ಕಂತು ಪಾವತಿಸಿಲ್ಲ. ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ಬಿಲ್‌ ಹಾಗೂ ಟ್ರ್ಯಾಕ್ಟ್ರ್‌ಗಳಿಗೆ ಹಣ ನೀಡದೆ ವಂಚನೆ ಮಾಡಿದ್ದಾರೆ. ಆದ್ದರಿಂದ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು, ಸಮಗ್ರ ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Spread the love

About Laxminews 24x7

Check Also

ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ

Spread the love ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ ಕರ್ನಾಟಕದಲ್ಲಿ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಅಡಿ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ