Breaking News

224ರ ಪೈಕಿ ಕೇವಲ 80 ಶಾಸಕರು ಸದನಕ್ಕೆ ಹಾಜರ್

Spread the love

ಬೆಳಗಾವಿ ಸುವರ್ಣಸೌಧದಲ್ಲಿ ಎರಡು ವರ್ಷಗಳ ಬಳಿಕ ಚಳಿಗಾಲ ಅಧಿವೇಶನ ಆರಂಭವಾಗಿದೆ. ಮೊದಲ ದಿನವೇ ಬಹಳಷ್ಟು ಶಾಸಕರು ಗೈರು ಹಾಜರಾಗಿದ್ದಾರೆ. 224 ಶಾಸಕರಲ್ಲಿ ಬರೀ 80 ಶಾಸಕರು ಮಾತ್ರ ಸದನದಲ್ಲಿ ಭಾಗಿಯಾಗಿದ್ದರು. ಬನ್ನಿ ಮೊದಲ ದಿನದ ಅಧಿವೇಶನದಲ್ಲಿ ಏನೆಲ್ಲಾ ಆಯ್ತು ಎಂದು ನೋಡಿಕೊಂಡು ಬರೋಣ.
ವಾ.ಓ: ಹೌದು ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಿದೆ. 10 ದಿನಗಳ ಕಾಲ ನಡೆಯುವ ಈ ಅಧಿವೇಶನಕ್ಕೆ ಬೇಕಾಗುವ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಾಸಕರು, ಸಚಿವರು ಬೆಳಗಾವಿಯ ಸುವರ್ಣಸೌಧಕ್ಕೆ ಆಗಮಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಅಧಿವೇಶನದಲ್ಲಿ ಭಾಗಿಯಾಗಿದ್ದರು. ಇನ್ನು ಮೊದಲ ದಿನವೇ ಕಲಾಪಕ್ಕೆ ಬಹುತೇಕ ಶಾಸಕರು ಗೈರಾಗಿದ್ದರು. ಆಡಳಿತ, ವಿಪಕ್ಷ ಸದಸ್ಯರ ಆಸನ ಖಾಲಿ ಖಾಲಿಯಾಗಿದ್ದವು. ಆಡಳಿತ ಪಕ್ಷದ ಸುಮಾರು 45, ವಿಪಕ್ಷದ ಸುಮಾರು 22, ಜೆಡಿಎಸ್ ಪಕ್ಷದ ಸುಮಾರು 13 ಶಾಸಕರμÉ್ಟೀ ಹಾಜರಾಗಿದ್ದಾರೆ.

ಮೊದಲ ದಿನದ ಕಲಾಪಕ್ಕೆ ಹೆಚ್‍ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಗೈರಾಗಿದ್ದರು. ಸದನ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಇತ್ತಿಚೆಗೆ ಅಗಲಿದ ಮಾಜಿ ಸದಸ್ಯರಾಗಿದ್ದ ಕೆ.ರಾಮಭಟ್ಟ, ಡಾ.ಎಂ.ಪಿ.ಕರ್ಕಿ, ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್, ಚಿತ್ರನಟರಾದ ಪುನೀತ್‍ರಾಜ್‍ಕುಮಾರ್, ಎಸ್.ಶಿವರಾಮ್, ಪ್ರೊ.ಕೆ.ಎಸ್.ನಾರಾಯಣಾಚಾರ್, ಮಾಜಿ ಸಚಿವ ಎಸ್.ಆರ್.ಮೋರೆ, ಆಂಧ್ರಪ್ರದೇಶ ಮಾಜಿ ಸಿಎಂ ಕೆ.ರೋಸಯ್ಯ, ಹಿರಿಯ ರಾಜಕಾರಣಿ ವಿರೂಪಾಕ್ಷಪ್ಪ ಅಗಡಿ ಸೇರಿದಂತೆ ಇನ್ನಿತರ ಗಣ್ಯರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಿಸಿದರು.

Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ