Breaking News

ಹೈ ಕೋರ್ಟ್​​​​ನಲ್ಲಿ ಹುದ್ದೆಗಳು ಖಾಲಿ ಇವೆ, ತಿಂಗಳಿಗೆ ₹ 63,070 ಸಂಬಳ 44m0 views17 shares

Spread the love

Karnataka High Court Recruitment 2021: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಕರ್ನಾಟಕ ಉಚ್ಛ ನ್ಯಾಯಾಲಯ(Karnataka High Court )ದಲ್ಲಿ ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಹೈ ಕೋರ್ಟ್​​ 21 ಜಿಲ್ಲಾ ನ್ಯಾಯಾಧೀಶರ(District Court Judges ) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಪೈಕಿ 18 ಬ್ಯಾಕ್​ಲಾಗ್(Back log)​ ಹುದ್ದೆಗಳು ಮತ್ತು 3 ಹೊಸ ಹುದ್ದೆಗಳಿವೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಕರ್ನಾಟಕ ಹೈ ಕೋರ್ಟ್​
ಹುದ್ದೆಯ ಹೆಸರು ಜಿಲ್ಲಾ ನ್ಯಾಯಾಧೀಶ
ಒಟ್ಟು ಹುದ್ದೆಗಳು 21
ಉದ್ಯೋಗದ ಸ್ಥಳ ಕರ್ನಾಟಕ
ವೇತನ ಮಾಸಿಕ ₹ 51,500- 63,070
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 09/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/12/2021

ವಿದ್ಯಾರ್ಹತೆ
ಕರ್ನಾಟಕ ಹೈಕೋರ್ಟ್​​ ನೇಮಕಾತಿಯ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಂಗೀಕೃತಗೊಂಡ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಹೈಕೋರ್ಟ್‌ನಲ್ಲಿ ಅಥವಾ ಅಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕಕ್ಕೆ ಕಡಿಮೆ ಇಲ್ಲದಂತೆ 7 ವರ್ಷಗಳಿಂದ ಅಡ್ವೋಕೇಟ್‌ ಆಗಿ ಪ್ರ್ಯಾಕ್ಟೀಸ್ ಮಾಡಿರಬೇಕು. ಅಂತಹವರು ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

: Government Jobs: ವಿಧಾನಸಭೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 34,800, ಈಗಲೇ ಅರ್ಜಿ ಸಲ್ಲಿಸಿ

ಆಸಕ್ತರು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ https://recruitmenthck.kar.nic.in/hck/djr/home.php ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ವಿಧಾನದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ವಯೋಮಿತಿ
ಕರ್ನಾಟಕ ಹೈಕೋರ್ಟ್​​ ನೇಮಕಾತಿಯ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ಈ ಕೆಳಕಂಡಂತಿದೆ.
SC / ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 48 ವರ್ಷ
ಇತರೆ ವರ್ಗದ ಅಭ್ಯರ್ಥಿಗಳಿಗೆ 45 ವರ್ಷ ನಿಗದಿಪಡಿಸಲಾಗಿದೆ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷ ಪ್ರೊಬೆಷನ್‌ ಅವಧಿ ಪೂರೈಸಬೇಕು. ಅಗತ್ಯವಿದ್ದಲ್ಲಿ ಪ್ರೊಬೆಷನ್‌ ಅವಧಿಯನ್ನು ಅಭ್ಯರ್ಥಿಗೆ ಮುಂದೂಡಲಾಗುತ್ತದೆ.

: Faculty Jobs: 437 ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 53,100 ಸಂಬಳ

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈ ಕೆಳಗಿನ ಮೂರು ಹಂತಗಳ ಪರೀಕ್ಷೆ ನಡೆಸಲಾಗುತ್ತದೆ.
ಪೂರ್ವ ಪರೀಕ್ಷೆ
ಮುಖ್ಯ ಪರೀಕ್ಷೆ
ಸಂದರ್ಶನ

ವೇತನ:
ಕರ್ನಾಟಕ ಹೈಕೋರ್ಟ್​​ ನೇಮಕಾತಿಯ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹51000-63000 ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪೂರ್ವ ಪರೀಕ್ಷೆಗೆ ಅರ್ಜಿ ಶುಲ್ಕ ₹ 500.
SC/ST ಅಭ್ಯರ್ಥಿಗಳು ₹ 250 ಅರ್ಜಿ ಶುಲ್ಕ ಪಾವತಿಸಬೇಕು.
ಪೂರ್ವ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದಲ್ಲಿ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1000 ಪಾವತಿಸಬೇಕು.
SC/ST ಅಭ್ಯರ್ಥಿಗಳು ರೂ.750 ಪಾವತಿಸಬೇಕು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ