Breaking News

ಸಿಎಂ ಬೊಮ್ಮಾಯಿ ಬೆಳಗಾವಿಗೆ, ಬಸವರಾಜ ಬೊಮ್ಮಾಯಿ ಪ್ರವಾಸ ಪಟ್ಟಿ ನೋಡಿದರೆ ಮತದ ಮೌಲ್ಯ ನಿಮಗೆ ಅರ್ಥವಾದೀತು.

Spread the love

ಬೆಂಗಳೂರು – ಶುಕ್ರವಾರ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಒಂದು ಮತದ ಮೌಲ್ಯ ಎಷ್ಟು? ಇದನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಬಹುದು? ಮತದಾರರಿಗೆ ಅಭ್ಯರ್ಥಿಗಳು ಹಂಚುವ ಹಣದ ಮೇಲೆ ಲೆಕ್ಕ ಹಾಕಬಹುದೆ?

 ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ ಪಟ್ಟಿ ನೋಡಿದರೆ ಮತದ ಮೌಲ್ಯ ನಿಮಗೆ ಅರ್ಥವಾದೀತು.

 

 

ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ 7.30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ಬಸವರಾಜ ಬೊಮ್ಮಾಯಿ ಅಲ್ಲಿಂದ ರಸ್ತೆ ಮಾರ್ಗವಾಗಿ ಶಿಗ್ಗಾಂವ್ ಗೆ ತೆರಳುವರು.

ಶಿಗ್ಗಾಂವ್ ದಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸುವ ಬೊಮ್ಮಾಯಿ ಅಲ್ಲಿಂದ 12 ಗಂಟೆಗೆ ರಸ್ತೆ ಮೂಲಕ 2.15ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಾಂಬ್ರಾದಿಂದ 3.15ಕ್ಕೆ ಇಂಡಿಗೋ ವಿಮಾನದ ಮೂಲಕ ತೆರಳಿ 4.45ಕ್ಕೆ ಬೆಂಗಳೂರಿಗೆ ತಲುಪುವರು.

ಒಂದೇ ಒಂದು ಮತ ಚಲಾಯಿಸುವುದಕ್ಕೋಸ್ಕರ ಮುಖ್ಯಮಂತ್ರಿಗಳು ಇಡೀ ದಿನವನ್ನು ಮೀಸಲಿಟ್ಟಿದ್ದು, ಲಕ್ಷಾಂತರ ರೂ. ವ್ಯಯಿಸುತ್ತಿದ್ದಾರೆ. (ಇದು ಸಾರ್ವಜನಿಕರ ತೆರಿಗೆ ಹಣವಾದರೂ ಮುಖ್ಯಮಂತ್ರಿಗಳು ಮತ ಚಲಾಯಿಸದೇ ಇದ್ದಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ ಎನ್ನುವುದು ಬೇರೆ)


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ