Breaking News

ಒಮಿಕ್ರಾನ್ ವಿರುದ್ಧ ಹೋರಾಟಕ್ಕೆ ಸಜ್ಜು: ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ

Spread the love

ಕೊರೊನಾ ವೈರಸ್‌ ಹೊಸ ರೂಪಾಂತರ ಒಮಿಕ್ರಾನ್ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿದೆ. ಒಮಿಕ್ರಾನ್ ಬಗ್ಗೆ ಡಬ್ಲ್ಯುಎಚ್ ಒ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳಿಗೆ ಸಲಹೆ ಕಳುಹಿಸಿದೆ. ಅಂತರಾಷ್ಟ್ರೀಯ ಪ್ರಯಾಣಿಕರು ಹಾಗೂ ಅವರ ಕಾಂಟೆಕ್ಟ್ ಟ್ರೇಸಿಂಗ್ ಸರಿಯಾದ ರೀತಿಯಲ್ಲಿ ಮಾಡಿ ಎಂದು ಕೇಂದ್ರ ಗೃಹ ಸಚಿವಾಲಯವು ತನ್ನ ಆದೇಶದಲ್ಲಿ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ.

ನವೆಂಬರ್ 25 ರಂದು ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿದೆ. ಗೃಹ ಸಚಿವಾಲಯದ ಮಾರ್ಗಸೂಚಿಗಳು ಡಿಸೆಂಬರ್ 31 ರ ವರೆಗೆ ಜಾರಿಯಲ್ಲಿರಲಿವೆ. ಕೊರೊನಾ ತಡೆಗಟ್ಟುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಗೃಹ ಸಚಿವಾಲಯದ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.

ಇಬ್ಬರು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಮರಳಿದ್ದಾರೆ. ಇಬ್ಬರಿಗೂ ಕೊರೊನಾ ಕಾಣಿಸಿಕೊಂಡಿದೆ. ಒಬ್ಬರಲ್ಲಿ ಡೆಲ್ಟಾ ರೂಪಾಂತರ ದೃಢಪಟ್ಟಿದೆ. ಇನ್ನೊಂದು ಡೆಲ್ಟಾಕ್ಕಿಂತ ವಿಭಿನ್ನವಾದ ರೂಪಾಂತರವನ್ನು ಹೊಂದಿದೆ. ಅದು ಒಮಿಕ್ರಾನ್ ಇರಬಹುದೆಂಬ ಭಯವಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ.

ಕೋವಿಡ್-19 ರ ಹೊಸ ರೂಪಾಂತರವಾದ ಒಮಿಕ್ರಾನ್, ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು. ನಂತ್ರ 17 ದೇಶಗಳಲ್ಲಿ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾಕ್ಕೆ ಅನೇಕ ದೇಶಗಳು ವಿಮಾನ ಹಾರಾಟ ನಿಷೇಧಿಸಿವೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸ್ವಲ್ಪ ನೆಮ್ಮದಿ ಸುದ್ದಿ ನೀಡಿದ್ದಾರೆ. ಭಾರತದಲ್ಲಿ ಕೊರೊನಾದ ಹೊಸ ರೂಪಾಂತರ ಒಮಿಕ್ರಾನ್‌ ಪ್ರಕರಣ ಪತ್ತೆಯಾಗಿಲ್ಲ. ಆದ್ರೆ ಜಾಗರೂಕರಾಗಿರಿ ಎಂದಿದ್ದಾರೆ.


Spread the love

About Laxminews 24x7

Check Also

ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿದೆ.

Spread the loveಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ