Breaking News

ವಂಚಕನಿ​​ಗೆ ಮುತ್ತಿಟ್ಟ ನಟಿ

Spread the love

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ವಂಚಕ ಸುಕೇಶ್​​ ಚಂದ್ರಶೇಖರ್​ ಜೊತೆ ಇರುವ ಮತ್ತೊಂದು ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿರುವ ಈ ಹೊಸ ಫೋಟೋದಲ್ಲಿ ಸುಕೇಶ್​ ಮಿರರ್​ ಸೆಲ್ಫಿ ಕ್ಲಿಕ್ಕಿಸುತ್ತಿದ್ದರೆ ನಟಿ ಜಾಕ್ವೆಲಿನ್​ ಆತನ ಕೆನ್ನೆಗೆ ಮುತ್ತು ನೀಡುತ್ತಿದ್ದಾರೆ.

 

ಈ ಫೋಟೋದಲ್ಲಿ ಜಾಕ್ವೆಲಿನ್​​ ಸುಕೇಶ್​​​ ಚಂದ್ರಶೇಖರ್​​ನನ್ನು ಬಿಗಿಯಾಗಿ ಹಿಡಿದುಕೊಂಡಿರೋದನ್ನೂ ಕಾಣಬಹುದಾಗಿದೆ. ಜಾಮೀನಿನ ಮೇಲೆ ಸುಕೇಶ್​​ ಹೊರಗಿದ್ದ ಸಂದರ್ಭದಲ್ಲಿ ಈ ವರ್ಷದ ಏಪ್ರಿಲ್​​ – ಜೂನ್​ ಸಮಯದಲ್ಲಿ ಕ್ಲಿಕ್ಕಿಸಿರುವ ಫೋಟೋ ಇದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಮೂಲದ 27 ವರ್ಷದ ಸುಕೇಶ್​ ವಿರುದ್ಧ 15 ಎಫ್​ಐಆರ್​ಗಳು ದಾಖಲಾಗಿವೆ. ಐಷಾರಾಮಿ ಜೀವನವನ್ನು ನಡೆಸುವ ಸಲುವಾಗಿ ಈತ ಬೆಂಗಳೂರು ಹಾಗೂ ಚೆನ್ನೈನ ವಿವಿಧ ಪ್ರದೇಶಗಳಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎನ್ನಲಾಗಿದೆ. ಈತ ಸದ್ಯ ದೆಹಲಿಯ ತಿಹಾರ್​ ಜೈಲಿನಲ್ಲಿದ್ದಾನೆ.

ಆಗಸ್ಟ್​ 23ರಂದು ಸುಕೇಶ್​ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದ ಜಾರಿ ನಿರ್ದೇಶನಾಲಯ ಐಷಾರಾಮಿ ಬಂಗಲೆ, 8.25 ಲಕ್ಷ ರೂಪಾಯಿ ನಗದು ಹಾಗೂ 12 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತ್ತು. ತಿಹಾರ್​ ಜೈಲಿನಲ್ಲಿದ್ದುಕೊಂಡೇ ಈತ ಬರೋಬ್ಬರಿ 200 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ನಡೆಸುತ್ತಿದ್ದ ಎನ್ನಲಾಗಿದೆ.

ರಾಜಕಾರಣಿಯ ಸಂಬಂಧಿ ಎಂದು ಹೇಳಿಕೊಳ್ತಿದ್ದ ಈತ ಕೆಲಸ ಮಾಡಿಕೊಡುತ್ತೇನೆಂದು ನಂಬಿಸಿ 100ಕ್ಕೂ ಅಧಿಕ ಮಂದಿಯನ್ನು ವಂಚಿಸಿದ್ದಾನೆ ಎನ್ನಲಾಗಿದೆ. ಈ ಲೂಟಿ ಹಣದಿಂದ ಈತ ರೋಲ್ಸ್​ ರಾಯ್ಸ್​​ನಂತಹ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ.


Spread the love

About Laxminews 24x7

Check Also

ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.

Spread the love ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ