Breaking News

ಅಭಿಮಾನಿಯ ಆಸೆ ಈಡೇರಿಸಿದ ಗೋಲ್ಡನ್‌ ಸ್ಟಾರ್ ಗಣೇಶ್

Spread the love

ಕಿರುತೆರೆಯಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿ ಇದೀಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟ ಗಣೇಶ್ ‘ಸಖತ್’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದು, ಇದರ ನಡುವೆ ಗಣಿ ಅಭಿಮಾನಿಯೊಬ್ಬರ ಆಸೆ ಈಡೇರಿಸಿದ್ದಾರೆ.ಕಿರುತೆರೆಯಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿ ಇದೀಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟ ಗಣೇಶ್ ‘ಸಖತ್’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದು, ಇದರ ನಡುವೆ ಗಣಿ ಅಭಿಮಾನಿಯೊಬ್ಬರ ಆಸೆ ಈಡೇರಿಸಿದ್ದಾರೆ.

ನಟ ಗಣೇಶ್​ಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದ್ದು, ಅವರ ನಟನೆ, ಕಾಮಿಡಿ ಇಷ್ಟಪಟ್ಟ ಮಂದಿಗೇನು ಕಮ್ಮಿಯಿಲ್ಲ. ಒಮ್ಮೆಯಾದರೂ ನೆಚ್ಚಿನ ನಟನನ್ನು ನೋಡಬೇಕೆಂಬುದು ಪ್ರತಿಯೊಬ್ಬ ಅಭಿಮಾನಿಯ ಆಸೆಯಾಗಿರುತ್ತದೆ. ಅದರಂತೆ ಭದ್ರಾವತಿ ಮೂಲದ ಬಾಲಕಿಯೊಬ್ಬಳು ಆಸೆ ಈಡೇರಿದೆ.

ಭದ್ರಾವತಿ ಮೂಲದ ಬಾಲಕಿ ಗಣೇಶ್ ಅಪ್ಪಟ ಅಭಿಮಾನಿ. ಮುಂಗಾರು ಮಳೆ ಸಿನಿಮಾದಿಂದ ಇಲ್ಲಿವರೆಗೆ ಗಣೇಶ್ ಅಭಿನಯದ ಎಲ್ಲ ಸಿನಿಮಾಗಳನ್ನು ನೋಡಿರುವ ಆ ಬಾಲಕಿ ಒಮ್ಮೆಯಾದರೂ ಗಣೇಶ್​​ ಜೊತೆ ಮಾತಾಡಬೇಕು, ಫೋಟೋ ತೆಗೆದುಕೊಳ್ಳಬೇಕು ಎಂಬ ಹಂಬಲ ಹೊಂದಿದ್ದರು.

ಸದ್ಯ ಬಾಲಕಿಯ ಕುಟುಂಬ ಬೆಂಗಳೂರಲ್ಲಿ ನೆಲಸಿದ್ದು, ಇತ್ತೀಚೆಗಷ್ಟೇ ರಿಲೀಸ್ ಆದ ಗಣೇಶ್ ನಟನೆಯ ಸಖತ್ ಸಿನಿಮಾ ನೋಡಲು ಒರಿಯನ್ ಮಾಲ್​ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಗಣೇಶ್ ಕೂಡ ಅದೇ ಮಾಲ್​ಗೆ​ ಹೋಗಿದ್ದರು. ಆಗ ಗಣೇಶ್ ಭೇಟಿ ಮಾಡಲು ಬಾಲಕಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಮೂರು ದಿನ ಊಟ ಬಿಟ್ಟಿದ್ದಾಳೆ. ಆಗ ಬಾಲಕಿ ಕುಟುಂಬಸ್ಥರು ಆಪ್ತರ ಮೂಲಕ ನೆಚ್ಚಿನ ನಟನನ್ನು ಭೇಟಿಯಾಗಿದ್ದಾರೆ.

ಗಣೇಶ್ ತಮ್ಮ ನೆಚ್ಚಿನ ಅಭಿಮಾನಿಯನ್ನು ಭೇಟಿ ಮಾಡಿ ಅಪ್ಪುಗೆ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಊಟ ಎಲ್ಲ ಬಿಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ. ಅಭಿಮಾನಿಯನ್ನು ಮನೆಗೆ ಕರೆಸಿ ವಿಶೇಷವಾಗಿ ಸತ್ಕರಿಸಿರುವ ಗಣಿ ಗೋಲ್ಡನ್ ಹಾರ್ಟ್​ಗೆ ಅಭಿಮಾನಿಯ ಕುಟುಂಬ ಹರ್ಷ ವ್ಯಕ್ತಪಡಿಸಿದೆ.

 


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ