ಬೆಂಗಳೂರು : ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ತಡರಾತ್ರಿ ಬಿಗ್ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮೇಲೆ ಬಿಯರರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.ತಡರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್ನಲ್ಲಿ ಪೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಕೀರ್ತಿ ಮೇಲೆ ವ್ಯಕ್ತಿಯೊಬ್ಬ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಸದಾಶಿವನಗರ ಪಬ್ ಗೆ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕಿರಿಕ್ ಕೀರ್ತಿ ಕೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಆ ವ್ಯಕ್ತಿ ಬಿಯರ್ ಬಾಟಲ್ ನಿಂದ ಕಿರಿಕ್ ಕೀರ್ತಿ ತಲೆಗೆ ಹೊಡೆದಿದ್ದಾನೆ.
ಸದ್ಯ ಗಾಯಗೊಂಡಿರುವ ಕಿರಿಕ್ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Laxmi News 24×7