Breaking News

ಹಮ್ ದೋ ಹಮಾರೆ ದೋ’ ಅಂದುಕೊಂಡು ದೇಶದ ಆಸ್ತಿಯನ್ನ ಅಂಬಾನಿ, ಅದಾನಿಗೆ ಮಾರೊದೊಂದೆ ಬಿಜೆಪಿಯ ಉದ್ಯೋಗ: ಲಕ್ಷ್ಮಿ ಹೆಬ್ಬಾಳ್ಕರ್

Spread the love

ಚಿಕ್ಕೋಡಿ: ಬಿಜೆಪಿ ಪಕ್ಷ ಏಳು ವರ್ಷದಲ್ಲಿ ಎಷ್ಟು ಕಡಿದುಕಟ್ಟೆ ಹಾಕಿದ್ದಾರೆ ಅನ್ನೋದನ್ನ ನೋಡಿದ್ದೇವೆ. ಕಾಂಗ್ರೆಸ್ ಪಕ್ಷ ಮಾಡಿಟ್ಟ ಆಸ್ತಿ ಮಾರೋದೇ ಬಿಜೆಪಿ ಅಭಿವೃದ್ಧಿ ಕಾರ್ಯವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ತಾಲೂಕಿನ ಯಕ್ಸಂಬಾದಲ್ಲಿ ಆಯೋಜಿಸಲಾಗಿದ್ದ ವಿಧಾನ ಪರಿಷತ್​​ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಯದ ಕೊರತೆ, ಅಭಾವದಿಂದಾಗಿ ಮನೆ‌ಮನೆಗೆ ಬಂದುಪ್ರಚಾರ ಮಾಡಲು ಆಗುತ್ತಿಲ್ಲ. ಹೀಗಾಗಿ ನಿಮ್ಮ ವಿನಂತಿಗೆ ಚಿಕ್ಕೋಡಿಗೆ ಬಂದಿದ್ದೇನೆ.

ಚುನಾಯಿತ ಎಲ್ಲ ಪ್ರತಿನಿಧಿಗಳು ನಮಗೆ ಬೆಂಬಲಿಸಬೇಕು. ಕಳೆದ ಇಪ್ಪತ್ತು ದಿನಗಳಿಂದ ನಡೆಯುತ್ತಿರುವ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ನನ್ನ ಸಹೋದರ, ಹೀಗಾಗಿ ಅವನಿಗೊಂದು ಅವಕಾಶ ಕೊಡಿ ಎಂದು ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.

ಬಿಜೆಪಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್​​​ ಹೇಳಿಕೆ : ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ದೇಶ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನವಿದೆ. ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಬಿಜೆಪಿಯವರು ಬರಿ ದೊಡ್ಡ ಭಾಷಣವನ್ನೇ ಮಾಡ್ತಾರೆ. ಆದರೆ, ಏಳು ವರ್ಷದಲ್ಲಿ ಎಷ್ಟು ಕಡಿದು ಕಟ್ಟೆ ಹಾಕಿದ್ದಾರೆ ಅನ್ನೋದನ್ನ ನೋಡಿದ್ದೇವೆ. ಕಾಂಗ್ರೆಸ್ ಪಕ್ಷ ಮಾಡಿಟ್ಟ ಆಸ್ತಿಯನ್ನ ಮಾರೋದೆ ಬಿಜೆಪಿಯ ಅಭಿವೃದ್ಧಿ ಕಾರ್ಯವಾಗಿದೆ. ಸರ್ಕಾರಿ ಆಸ್ತಿಗಳನ್ನ ‘ಹಮ್ ದೋ ಹಮಾರೆ ದೋ’ ಅಂದುಕೊಂಡು ದೇಶದ ಆಸ್ತಿಯನ್ನ ಅಂಬಾನಿ, ಅದಾನಿಗೆ ಮಾರೊದೊಂದೆ ಬಿಜೆಪಿಯ ಉದ್ಯೋಗ ಆಗಿದೆ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ