Breaking News

4 ಬಾರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ನಾಲ್ಕು ಬಾರಿಯೂ ಅವನ್ಯಾವನ್ನೋ ಕರೆದುಕೊಂಡು ಬಾ. ಅವನಿಗೆ ದುಡ್ಡು ಕೊಡು ಹೀಗೆ ಇದೇ ಆಯ್ತು

Spread the love

ಕೊಪ್ಪಳ: ಕರ್ನಾಟಕ ರಾಜ್ಯದಲ್ಲಿ 4 ಬಾರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ನಮ್ಮ ಗ್ರಹಚಾರ ಸರಿ ಇಲ್ಲ, ಪೂರ್ಣ ಬಹುಮತ ಸಿಗಲಿಲ್ಲ. ನಾಲ್ಕು ಬಾರಿಯೂ ನಮಗೆ ಪೂರ್ಣ ಬಹುಮತ ಸಿಗಲೇ ಇಲ್ಲ. ಜನ ಆಡಳಿತ ಮಾಡಿ ಅಂತಾರೆ, ಆದ್ರೆ ಒಂದು ಸ್ಥಾನ ಕಡಿಮೆ, ನಾಲ್ಕು ಸ್ಥಾನ ಕಡಿಮೆ ಬರುತ್ತೆ, 4 ಬಾರಿಯೂ ಹಾಗೇ ಆಯ್ತು.

ನಾಲ್ಕು ಬಾರಿಯೂ ಅವನ್ಯಾವನ್ನೋ ಕರೆದುಕೊಂಡು ಬಾ. ಅವನಿಗೆ ದುಡ್ಡು ಕೊಡು ಹೀಗೆ ಇದೇ ಆಯ್ತು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ಧಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಭಾಷಣದ ನಡುವೆ ಕೆ.ಎಸ್. ಈಶ್ವರಪ್ಪ ಆಪರೇಷನ್ ಕಮಲಕ್ಕೆ ದುಡ್ಡು ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಪರಿಷತ್ ಚುನಾವಣೆ ದಿಕ್ಸೂಚಿ ಅಂದ್ರೆ ಒಪ್ಪಲು ತಯಾರಿದ್ದೀವಿ. ಮುಂದಿನ ಚುನಾವಣೆಗೆ ಇದು ದಿಕ್ಸೂಚಿ ಅಂದರೆ ಒಪ್ಪಬಹುದು. ಈ ಬಾರಿ ನಮ್ಮದೇ ಮೆಜಾರಿಟಿಯಿದೆ. ಶಾಸಕರು, ಸಂಸದರು, ಗ್ರಾ.ಪಂ. ಸದಸ್ಯರು ನಮ್ಮವರೇ ಇದ್ದಾರೆ. ಹಾಗಾಗಿ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್​ ಪಕ್ಷವನ್ನು ವಿರೋಧ ಪಕ್ಷವೆಂದು ಕರೆಯಲು ಆಗಲ್ಲ. ಇದೀಗ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

ಕಾಂಗ್ರೆಸ್​ ಪಕ್ಷದವರಿಗೆ ರಾಷ್ಟ್ರೀಯವಾದ ಅನ್ನುವುದೇ ಗೊತ್ತಿಲ್ಲ. ಗಾಂಧಿವಾದವನ್ನೇ ರಾಷ್ಟ್ರೀಯವಾದ ಅಂದ್ಕೊಂಡಿದ್ದಾರೆ ಇವರು. ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನೇ ಬೈತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 45 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಿಂದ ಹಾನಿಯಾಗಿದೆ. ರಾಜ್ಯ ಸರ್ಕಾರ ಎಲ್ಲಾ ಪರಿಹಾರ ಕಾರ್ಯವನ್ನು ಕೈಗೊಂಡಿದೆ ಎಂದು ಕಾರಟಗಿಯಲ್ಲಿ ಈಶ್ವರಪ್ಪ ತಿಳಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಈಶ್ವರಪ್ಪ ಯು ಟರ್ನ್ ಹೊಡೆದಿದ್ದಾರೆ. ಚುನಾವಣೆವರೆಗೂ ಬೊಮ್ಮಾಯಿರವರೇ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯವರೆಗೂ ಬೊಮ್ಮಾಯಿರವರೇ ಸಿಎಂ. ನಾನು ಬದಲಾಗಬಹುದು ಅಂತಾ ಹೇಳಿದ್ದೇನೆ ಅಷ್ಟೇ ಎಂದು ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿದೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದೆ. ಆದರೆ, ಕಾರ್ಯಕ್ರಮದಲ್ಲಿ ಸಾವಿರಾರು ಕುರ್ಚಿ ಹಾಕಿದ್ರೂ ಕೇವಲ 30 ಜನ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ಶಾಸಕ ಬಸವರಾಜ ದಡೇಸುಗೂರು ಪ್ರತಿನಿಧಿಸುವ ಕ್ಷೇತ್ರ, ಹಾಲಿ ಶಾಸಕರಿರುವ ಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕ್ರಮದಲ್ಲಿ ಜನರು ಭಾಗಿಯಾಗಿಲ್ಲ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ