Breaking News

C.M. ಆಗ್ತಾರಾ ಮುರಾಗೇಶ್ ನಿರಾಣಿ ಏನಿದು ಈಶ್ವರಪ್ಪ ಹೊಸ ಬಾಂಬ್

Spread the love

ಬಾಗಲಕೋಟೆ: ನಮ್ಮ ನಾಯಕ ಮುರುಗೇಶ್ ನಿರಾಣಿ ಬೇಗನೇ ಸಿಎಂ ಆಗ್ತಾರೆ. ಯಾವ ಸಂದರ್ಭದಲ್ಲಿ ಎಂದು ಗೊತ್ತಿಲ್ಲ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುತೂಹಲ ಮೂಡಿಸಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ, ನಮ್ಮ ನಾಯಕ ನಿರಾಣಿಯವರು ಶೀಘ್ರದಲ್ಲಿಯೇ ಸಿಎಂ ಆಗ್ತಾರೆ. ಆದರೆ ಯಾವ ಸಂದರ್ಭದಲ್ಲಿ ಎಂಬುದು ನನಗೆ ಗೊತ್ತಿಲ್ಲ. ನಾಳೇನೆ ಆಗ್ತಾರಾ?, ಬೊಮ್ಮಾಯಿಯನ್ನು ಕೆಳಗಿಳಿಸ್ತಾರಾ? ಹೀಗೆಂದು ಮಾಧ್ಯಮದವರು ಬರಬೇಡಿ… ನಿರಾಣಿಗೆ ಸಿಎಂ ಆಗುವ ಶಕ್ತಿ ಇದೆ, ಇವತ್ತಲ್ಲ ನಾಳೆ ಆಗ್ತಾರೆ ಎಂದರು.

ಇಡೀ ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವಂಥ ಸಿಎಂ ಆಗಬೇಕು. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡ್ತಿಯೇನಪ್ಪಾ? ಎಂದು ಈಶ್ವರಪ್ಪ ಮುರುಗೇಶ್ ನಿರಾಣಿ ಬಳಿ ಕೇಳಿದ್ದಾರೆ. ಇದಕ್ಕೆ ನಿರಾಣಿಯಯವರು ಆಗಲಿ ಎಂದು ನಗುತ್ತಲೇ ಉತ್ತರುಸಿದ ಪ್ರಸಂಗ ನಡೆದಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ