ಬೆಳಗಾವಿಯಟಳಕವಾಡಿಯ ಎಸ್‍ಕೆಇ ಸೊಸೈಟಿಯ ಹೈಸ್ಕೂಲ್ ವಿದ್ಯಾರ್ಥಿಗಳು ಅಖಂಡ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜರ ಜೀವನ ಹಾಗೂ ವೈಭವಯುತ ಆಡಳಿತವನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ಈ ಕಿಲ್ಲಾ ಮಾದರಿಗಳನ್ನು ತಮ್ಮದೇ ಆದ ಪರಿಕಲ್ಪನೆಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕಿಲ್ಲಾ ಮಾದರಿಗಳ ಉದ್ಘಾಟನೆಯನ್ನು ಲೋಕಮಾನ್ಯ ಸೊಸೈಟಿ ಹಾಗೂ ಭಗವೇವಾದಳ್ ಸಂಸ್ಥೆಯ ಪಧಾಧಿಕಾರಿಗಳು ನೆರವೇರಿಸಿ ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಶಿಸಿದರು.
ಒಬ್ಬರಿಗಿಂತ ಒಬ್ಬರು ಶೂರ ಸೈನಿಕರು, ಒಂದಕ್ಕಿಂದ ಒಂದು ಅಭೇದ್ಯ ಕೋಟೆಗಳು, ಶಿವಾಜಿ ಮಹಾರಾಜರ ಜೀವನ ಹಾಗೂ ವೈಭವಯುತ ಆಡಳಿತವನ್ನು ತಿಳಿಸುವ ಈ ಕಿಲ್ಲಾ ಮಾದರಿಗಳು ಮೂಡಿ ಬಂದಿದ್ದು ಟಳಕವಾಡಿ ಹೈಸ್ಕೂಲ್ ವಿದ್ಯಾರ್ಥಿಗಳ ಈ ರೀತಿಯ ಪರಿಕಲ್ಪನೆಯಲ್ಲಿ.
ಎಸ್‍ಕೆಇ ಸಮಸ್ಥೆಯ ಅಧ್ಯಕ್ಷರಾದ ಕಿರಣ್ ಠಾಕೂರ್, ಉಪಾಧ್ಯಕ್ಷರಾದ ಎಸ್‍ವೈ ಪ್ರಭು, ಪ್ರಾಂಶುಪಾಲರಾದ ಆರ್.ಆರ್ ಕುಡತೂರ್‍ಕರ್, ಸೌರಭ ಕುಂಬಾರವಾಡಿ, ಇವರ ಸಹಾಯದಿಂದ ಶಾಲೆಯ 6ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಕಿಲ್ಲಾ ಮಾದರಿಗಳನ್ನು ತಯಾರಿ ಮಾಡಿದ್ದರು.