ರಾಮನಗರ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತೇವೆ ಎನ್ನುವ ಬಿಜೆಪಿಯವರು, ಸೋಲುವ ಉಳಿದ 10 ಕ್ಷೇತ್ರಗಳು ಯಾವುವು ಎಂಬುದನ್ನೂ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಬಿಜೆಪಿ 25 ಕ್ಷೇತ್ರಗಳನ್ನೂ ಗೆಲ್ಲಬಹುದು. ಅವರು ಮತ್ತು ಜೆಡಿಎಸ್ನವರು ಯಾವಾಗ ಕಿತ್ತಾಡುತ್ತಾರೋ ಯಾವಾಗ ಒಂದಾಗುತ್ತಾರೋ ಅವರಿಗೇ ಗೊತ್ತು’ ಎಂದು ಅವರು ಲೇವಡಿ ಮಾಡಿದರು.