Breaking News

ಹೊಸ ರೂಪಾಂತರಿ ಒಮಿಕ್ರೋನ್ ಕೋವಿಡ್ ಆತಂಕ ಹಿನ್ನೆಲೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್

Spread the love

ಬೆಳಗಾವಿ: ಹೊಸ ರೂಪಾಂತರಿ ಒಮಿಕ್ರೋನ್ ಕೋವಿಡ್ ಆತಂಕ ಹಿನ್ನೆಲೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ವ್ಯಾಕ್ಸಿನ್​​​ ಮತ್ತು ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯಿರುವ ಕೋಗನೊಳ್ಳಿ ಚೆಕ್ ಪೋಸ್ಟ್​ನಲ್ಲಿ‌ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ಮಹಾರಾಷ್ಟ್ರದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ನಡೆಸುತ್ತಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಗಡಿಯೊಳಗೆ ಪ್ರವೇಶ ಕಲ್ಪಿಸಲಾಗುತ್ತಿದ್ದು, ಲಸಿಕೆ ಪಡೆಯದಿರುವ ಪ್ರಯಾಣಿಕರನ್ನು ಮರಳಿ ಮಹಾರಾಷ್ಟಕ್ಕೆ ಹಿಂದಿರುಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದೆರಡು ವರ್ಷಗಳಿಂದ ಕೊರೊನಾದಿಂದ ಇಡೀ ದೇಶ ನಲುಗಿದ್ದು, ರೂಪಾಂತರಿ ವೈರಸ್​​ ರಾಜ್ಯಕ್ಕೆ ಬರದಂತೆ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ.


Spread the love

About Laxminews 24x7

Check Also

ಬೆಳಗಾವಿ: ಇಂದಿನಿಂದ ಕೆಎಸ್‌ಎನ್ ಗೀತೆಗಳ ಗಾಯನ ತರಬೇತಿ

Spread the love‌ಬೆಳಗಾವಿ: ‘ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ‘ಕೆ.ಎಸ್‌.ನರಸಿಂಹಸ್ವಾಮಿ ನೆನಪಿನ ವಸಂತೋತ್ಸವ’ ‍ಪ್ರಯುಕ್ತ, ಮಾರ್ಚ್‌ 10, 11ರಂದು ಕೆ.ಎಸ್.ನರಸಿಂಹಸ್ವಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ