Breaking News

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಶಬ್ಧಕೇಳಿಬಂದಿದ್ದು, ಹಲವೆಡೆ ಭೂಮಿ ಕಂಪಿಸಿದ ಅನುಭವ.

Spread the love

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಶಬ್ಧವೊಂದು ಕೇಳಿಬಂದಿದ್ದು, ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಆರ್.ಆರ್.ನಗರ, ಮಾಗಡಿ, ಹೆಮ್ಮಿಗೆಪುರ, ಕಗ್ಗಲಿಪುರ, ಕೆಂಗೇರಿ, ಬಿಡದಿ ಭಾಗಗಳಲ್ಲಿ ಹಲವೆಡೆ ಭೂಗರ್ಭದೊಳಗಿಂದ ಭಾರಿ ಶಬ್ಧ ಕೇಳಿಬಂದಿದ್ದು, ಕೆಲಕಾಲ ಭೂಮಿ ಕಂಪಿಸಿದೆ ಎಂದು ಹೇಳಲಾಗುತ್ತಿದೆ.

 

ಇದರಿಂದ ಜನರು ಆತಂಕಕ್ಕೀಡಾಗಿ ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ.

ಮಧ್ಯಾಹ್ನ 12.15ರ ಸುಮಾರಿಗೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಬೆಂಗಳೂರಿನ ಹಲವೆಡೆ ಹಾಗೂ ರಾಮನಗರದಲ್ಲಿ ಭೂಕಂಪನದ ಅನುಭವವಾಗಿದೆ. ಆದರೆ ರಿಕ್ಟರ್ ಮಾಪಕದಲ್ಲಿ ಯಾವುದೇ ಭೂ ಕಂಪನದ ತೀವ್ರತೆ ದಾಖಲಾಗಿಲ್ಲ ಎಂದು ಭೂವಿಜ್ಞಾನಿ ಹೆಚ್ ಎನ್ ಎಸ್ ಪ್ರಸಾದ್ ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ