ಬೆಂಗಳೂರು: ಪೇಜಾವರ ಶ್ರೀಗಳ ಕುರಿತ ಹೇಳಿಕೆ ಕುರಿತಂತೆ ಇಂದು ವಿಚಾರಣೆಗೆ ಹಾಜರಾಗಿದ್ದ ಹಿರಿಯ ನಿರ್ದೇಶಕ ಹಂಸಲೇಖ ಅವರು ವಿಚಾರಣೆ ಮುಗಿಸಿ ಪೊಲೀಸ್ ಠಾಣೆಯಿಂದ ಹೊರಟ್ಟಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ರಾಣೆ ಬಳಿ ವಕೀಲರೊಂದಿಗೆ ಆಗಮಿಸಿದ್ದ ಹಂಸಲೇಖ ಅವರು ಬಸವನಗುಡಿ ಠಾಣೆ ಠಾಣಾಧಿಕಾರಿ ರಮೇಶ್ ನೇತೃತ್ವದಲ್ಲಿ ವಿಚಾರಣೆ ಎದುರಿಸಿದರು. ಪೊಲೀಸರು ಪ್ರಕರಣದಲ್ಲಿ ಸುಮಾರು 25-30 ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಹಂಸಲೇಖ ಅವರಿಂದ ವಿವರಣೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಕೀಲ ದ್ವಾರಕನಾಥ್ ಅವರು, ನಾವು ಕಾನೂನಿಗೆ ಗೌರವ ಕೊಡ್ತೀವಿ. ಮತ್ತೆ ವಿಚಾರಣೆಗೆ ಕರೆದರೆ ಬರ್ತಿವಿ ಅಂತ ಹೇಳಿದ್ದಾರೆ. ಈಗ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ ಹೆಚ್ಚಿನ ಮಾಹಿತಿ ನೀಡಲು ಆಗೋದಿಲ್ಲ. ನಮಗೆ ಸಂವಿಧಾನದಲ್ಲಿ ಗೌರವ ಇದೆ. ಮುಂದಿನ ವಿಚಾರಣೆಗೆ ಯಾವುದೇ ದಿನಾಂಕ ಕೊಟ್ಟಿಲ್ಲ. ಅಗತ್ಯವಿದ್ದರೆ ವಿಚಾರಣೆ ಕರೆಯುತ್ತೇವೆ ಅಂತ ಹೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.