Breaking News

ಮನೆಯ ಪೈಪ್ ಗಳನ್ನು ಪ್ಲಂಬರ್ ಸಹಾಯದಿಂದ ಕತ್ತರಿಸಿದ್ದು, ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು,

Spread the love

ಕಲಬುರ್ಗಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಸಮರ ಸಾರಿದ್ದು, ತಂಡೋಪತಂಡವಾಗಿ ರಾಜ್ಯದ 68 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಭ್ರಷ್ಟರ ಮನೆಯಲ್ಲಿ ಪತ್ತೆಯಾಗಿರುವ ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು, ಅಕ್ರಮ ಸಂಪತ್ತು ಕಂಡು ಅಧಿಕಾರಿಗಳೇ ದಂಗಾಗಿಹೋಗಿದ್ದಾರೆ.

ಎಸಿಬಿ ದಾಳಿಗೆ ಹೆದರಿ ಕಲಬುರ್ಗಿ ಲೋಕೋಪಯೋಗಿ ಇಲಾಖೆ ಜೆಇ ಶಾಂತಗೌಡ ಮನೆಯ ಪೈಪ್ ಗಳಲ್ಲಿ ನಗದು ಹಣವನ್ನು ಬಚ್ಚಿಟ್ಟಿದ್ದು, ಪೈಪ್ ಕತ್ತರಿಸಿ ಬಕೆಟ್ ಗಳಲ್ಲಿ ಕಂತೆ ಕಂತೆ ಹಣವನ್ನು ಮೊಗೆದು ಹೊರತೆಗೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಶಾಂತಗೌಡ ಅವರ ಕಲಬುರ್ಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಮೂರು ಅಂತಸ್ಥಿನ ಭವ್ಯ ಬಂಗಲೆಯಲ್ಲಿ ಜಾಲಾಡಿರುವ ಎಸಿಬಿ ಅಧಿಕಾರಿಗಳು ಅಪಾರ ಸಂಪತ್ತು, ಅಕ್ರಮ ಆಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆಯ ಪೈಪ್ ಗಳನ್ನು ಪ್ಲಂಬರ್ ಸಹಾಯದಿಂದ ಕತ್ತರಿಸಿದ್ದು, ಈ ವೇಳೆ ಪೈಪ್ ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಅವುಗಳನ್ನು ಬಕೆಟ್ ಗಳಲ್ಲಿ ತುಂಬಿ ಹೊರ ತಂದಿದ್ದಾರೆ.

ವಿವಿ ರಸ್ತೆಯಲ್ಲಿ ಎರಡು ನಿವೇಶನ, ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು, ಹಂಗರಗಾ ಗ್ರಾಮದಲ್ಲಿ ಮೂರು ಮನೆ, ಬೆಂಗಳೂರಿನಲ್ಲಿಯೂ ಅಕ್ರಮ ಆಸ್ತಿಯನ್ನು ಶಾಂತಗೌಡ ಹೊಂದಿರುವುದಾಗಿ ತಿಳಿದುಬಂದಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ