Breaking News

ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ.

Spread the love

   ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ.
ತನ್ಮೂಲಕ, ನಾಯಿಯೊಂದು ತನ್ನ ಪ್ರಾಣ ತೆತ್ತು ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.
  ಶುಕ್ರವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಶಿವಬಸವ ನಗರದ ಹೆಸ್ಕಾಮ್ ಕಲ್ಯಾಣ
ಮಂಟಪವಿರುವ ಮುಖ್ಯ ರಸ್ತೆಯ ಬದಿಯ ಫುಟ್ ಪಾಥ್ ಮೇಲೆ ಜೀವಂತ ತಂತಿ ಬಿದ್ದಿತ್ತು. ಡಾ.ರಾಜು ನಾಯಕ ಅವರ ಜೆರ್ಮನ್ ಶೆಫರ್ಡ ಶ್ವಾನ ಮ್ಯಾಕ್ಸ್ ಅಲ್ಲಿ ಮೂತ್ರ ವಿಸರ್ಜನೆಗೆ ಹೋಗಿತ್ತು.
ದೂರದಲ್ಲಿ ಡಾ.ನಾಯಕ ಅವರು ಮನೆ ಎದುರು ನಿಂತಿದ್ದರು. ನಾಯಿ ಒಮ್ಮೆಲೇ ವಿದ್ಯುತ್ ಸ್ಪರ್ಷದಿಂದ ಕ್ಷಣಾರ್ಧದಲ್ಲಿ ಸತ್ತೇ ಹೋಯಿತು.
 ಇದರಿಂದ ಗಾಬರಿಗೊಂಡ ನಾಯಕ ಅವರು ಹೆಸ್ಕಾಮ್ ಸಿಬ್ಬಂದಿಗೆ ಮತ್ತು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಫೋನ್ ಮಾಡಿ ತಿಳಿಸಿದರು. ಹೆಸ್ಕಾಮ್ ಸಿಬ್ಬಂದಿ ಧಾವಿಸಿ ಬಂದು ವಿದ್ಯುತ್ ಸಂಪರ್ಕವನ್ನು ರಾತ್ರಿ 11.45 ಕ್ಕೆ ಕಡಿತಗೊಳಿಸಿದರು.
 

Spread the love

About Laxminews 24x7

Check Also

ಇಂದು ರಾಯಚೂರಿಗೆ ಸಿಎಂ – ತಿಂಥಣಿ ಬ್ರಿಡ್ಜ್ ಕನಕಗುರು ಪೀಠಕ್ಕೆ ಭೇಟಿ

Spread the loveರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು (ಜ.1) ರಾಯಚೂರು  ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ತಿಂಥಣಿ ಬ್ರಿಡ್ಜ್ ಕನಕಗುರು ಪೀಠಕ್ಕೆ ಭೇಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ