ತಿರುಪತಿ: ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಅಸ್ತಗೊಂಡಿದೆ. ಟಿಟಿಡಿಯ ಎರಡು ಘಾಟ್ ರಸ್ತೆಗಳ ಮೇಲೆ ಕಲ್ಲುಬಂಡೆಗಳು ಉರುಳಿಬಿದ್ದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎರಡು ದಿನಗಳ ಕಾಲ ಪಾದಚಾರಿ ಮಾರ್ಗವನ್ನೂ ಟಿಟಿಡಿ ಮುಚ್ಚಿದೆ. ತಿರುಪತಿಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ನೀರು ನುಗ್ಗಿದೆ. ಟಿಟಿಡಿಯ ಎಲ್ಲ ಸರ್ವರ್, ನೆಟ್‌ವರ್ಕ್ ಕೂಡ ಸ್ಥಗಿತವಾಗಿದ್ದು, ನಗರದಲ್ಲಿ ರೈಲ್ವೆ ಅಂಡರ್‌ಪಾಸ್‌ಗಳು ಮುಳುಗಡೆಯಾಗಿವೆ. ರೇಣಿಗುಂಟ ಏರ್‌ಪೋರ್ಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಸ್ತಬ್ಧವಾಗಿದೆ. ಭಾರಿ ಮಳೆಯಿಂದ ಅಪಾಯದ ಮುನ್ಸೂಚನೆ ಇರುವ ಕಾರಣ, ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ ನೀಡಲಾಗಿದೆ.
ತಿರುಪತಿಗೆ ಹೋಗುವ ಪಾದಾಚಾರಿ ಮಾರ್ಗ ಅಪಾಯದ ಸ್ಥಿತಿಯಲ್ಲಿರುವುದು
Andhra Pradesh: Heavy rainfall leads to inundation of roads in Tirupati
CM YS Jagan Mohan Reddy has directed the authorities to be vigilant and take necessary measures in wake of the inclement weather. pic.twitter.com/4h6tdgv6Ro
— ANI (@ANI) November 18, 2021
ಟಿಟಿಡಿಯಲ್ಲಿ ಭಾರಿ ಮಳೆಯ ಕಾರಣ, ದೇವರ ದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ವರ್ಚುಯಲ್ ಮುಖಾಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ದೇವಸ್ಥಾನದ ಆಡಳಿತ ಮಂಡಳಿ ಮಳೆಯಿಂದ ಸಿಲುಕಿಕೊಂಡಿರುವ ಯಾತ್ರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಿದೆ. ಇಂದು (ಶುಕ್ರವಾರ) ದೇವಸ್ಥಾನದ ಕಛೇರಿಗೆ ರಜೆ ಘೋಷಿಸಲಾಗಿದೆ ಎಂದು ಟಿಟಿಡಿ ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ ತಿಳಿಸಿದ್ದಾರೆ.
ಇಂದು ಕೂಡ ಆಂಧ್ರಪ್ರದೇಶದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅದರಲ್ಲೂ ಅನಂತಪುರ ಹಾಗೂ ಕಡಪ ಜಿಲ್ಲೆಗಳಲ್ಲಿ ಶುಕ್ರವಾರ ಮುಂಜಾನೆ ಪ್ರವಾಹದ ಪರಿಸ್ಥಿತಿಯ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ.