Breaking News

ಒಂದು ವರ್ಷದಲ್ಲಿ ಎಮ್ಮೆ ಕಾಂತಣ್ಣ ಒಟ್ಟು ಏಳು ಹಸುಗಳನ್ನು ಕಳೆದುಕೊಂಡಿದ್ದಾರೆ.

Spread the love

ಚಿಕ್ಕಮಗಳೂರು: ಕಳೆದ ಹತ್ತು ತಿಂಗಳಲ್ಲಿ ಏಳು ಹಸುಗಳನ್ನು ಕಳೆದುಕೊಂಡಿದ್ದೇನೆ. ದನಗಳ್ಳರನ್ನು ಹಿಡಿದುಕೊಟ್ಟರೆ ನಿಂತ ಜಾಗದಲ್ಲಿ ನಾನೇ ಅವರಿಗೆ 50 ಸಾವಿರ ಹಣ ಕೊಡುತ್ತೇನೆ ಎಂದು ಚಿಕ್ಕಮಗಳೂರು ತಾಲೂಕಿನ ತೇಗೂರಿನ ರೈತ ಕಾಂತರಾಜ್ ಆಫರ್ ಕೊಟ್ಟಿದ್ದಾರೆ.

ದನಗಳ್ಳರನ್ನು ಯಾರೇ ಹಿಡಿದುಕೊಟ್ಟರು ಅವರಿಗೆ ಹಣ ಕೊಡುತ್ತೇನೆ ಎಂದು ಘೋಷಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರೈತ ಕಾಂತರಾಜು ಅಲಿಯಾಸ್ ಎಮ್ಮೆ ಕಾಂತಣ್ಣರವರ ಎಂಟೂವರೆ ತಿಂಗಳ ಗರ್ಭಿಣಿ ಹಸುವನ್ನು ದನಗಳ್ಳರು ಸ್ಕಾರ್ಪಿಯೋ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಈ ವೇಳೆ ಹಸುವಿನ ಕರು ಕಾರಿನ ಹಿಂದೆ ಅಮ್ಮನಿಗಾಗಿ ಓಡುವ ದೃಶ್ಯ ಮನಕಲಕುವಂತಿತ್ತು

ಮೇವಿಗೆ ಹೋಗಿದ್ದ ಹಸುಗಳು, ಜೋಳದ ಹೊಲಕ್ಕೆ ಹೋದ ದನಗಳು ಬರುತ್ತವೆ ಎಂದು ಅಲ್ಲೇ ಬಿಟ್ಟು ಬಂದಿದ್ದರು. ರಾಸುಗಳ ಜಮೀನು ಪಕ್ಕದಲ್ಲಿ ಜಾಗದಲ್ಲೇ ಇದ್ದವು. ಇದೇ ಮೊದಲಲ್ಲ ಈ ಹಿಂದೆಯೂ ರಾಸುಗಳು ಮನೆಗೆ ಬರದಿದ್ದರೆ ಅಲ್ಲೇ ಇರುತ್ತಿದ್ದವು. ಆದರೆ ಹೊಲದ ಪಕ್ಕದಲ್ಲೇ ಇದ್ದ ರಾಸುಗಳನ್ನು ಮೊನ್ನೆ ರಾತ್ರಿ ಕಿರಾತಕರು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಇದರಿಂದ ಮನನೊಂದ ರೈತ ಕಾಂತಣ್ಣ ದನಗಳ್ಳರ ತಲೆ ಇನಾಮು ಘೋಷಿಸಿದ್ದಾರೆ.

ಅಷ್ಟೆ ಅಲ್ಲದೆ ಕಳೆದ ಒಂದು ವರ್ಷದಲ್ಲಿ ಎಮ್ಮೆ ಕಾಂತಣ್ಣ ಒಟ್ಟು ಏಳು ಹಸುಗಳನ್ನು ಕಳೆದುಕೊಂಡಿದ್ದಾರೆ. ಆರು ಹಸುಗಳನ್ನ ಕದ್ದಿದ್ದಾರೆಂಬ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಮೇವಿಗೆ ಹೋದ ರಾಸುಗಳು ಮನೆಗೆ ಬಂದಿಲ್ಲ. ಪ್ರತಿನಿತ್ಯ ಬರುತ್ತಿದ್ದ ರಾಸುಗಳು ಅಂದು ಬಂದಿಲ್ಲ. ಜೊತೆಗೆದ್ದ ಎಲ್ಲಾ ಹಸುಗಳು ಬಂದಿದ್ದು, ಅವುಗಳು ಮಾತ್ರ ಕಾಣೆಯಾಗಿವೆ ಅಂದರೆ ದನಗಳ್ಳರು ಕದ್ದಿದ್ದಾರೆಂದು ಭಾವಿಸಲಾಗಿದೆ. ಅದರಲ್ಲಿ ವಯಸ್ಸಿಗೆ ಬಂದ ಕರುಗಳೇ ಹೆಚ್ಚು. ಆದ್ದರಿಂದ ಕಾಂತಣ್ಣ ಸಾಕಷ್ಟು ನೊಂದು ಈ ತೀರ್ಮಾನಕ್ಕೆ ಬಂದಿದ್ದಾರೆ.


Spread the love

About Laxminews 24x7

Check Also

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

Spread the loveಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಪಕ್ಷದ ವಿರುದ್ಧವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ