ಸುಳಗಾ(ಉ) ಗ್ರಾಮ ಪಂಚಾಯತ ಪಿಡಿಓ ಹಾಗೂ ಕಾರ್ಯದರ್ಶಿ ಗ್ರಾಮ ಪಂಚಾಯತ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ. ಇನ್ನು ಎಸ್‍ಸಿ ಎಸ್‍ಟಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂದು ಅಂಬೇಡ್ಕರ್ ಶಕ್ತಿ ಸಂಘದ ಸದಸ್ಯರು ಆರೋಪಿಸಿದ್ರು. ಇನ್ನು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿದರು.
ಸುಳಗಾ (ಉ)ಗ್ರಾಮ ಪಂಚಾಯತ ಪಿಡಿಓ ಪೂನಂ ಗಾಡಗೆ ಹಾಗೂ ಕಾರ್ಯದರ್ಶಿ ಕೇವಲ ತಡೆಗೋಡೆ ಹಾಗೂ ಒಳಚರಂಡಿ ನಿರ್ಮಾಣಕ್ಕೆಂದು ಅನುದಾನವನ್ನು ಬಳಕೆ ಮಾಡಿದ್ದಾರೆ. ಒಂದೇ ಕಾಮಗಾರಿಯನ್ನು ತೋರಿಸಿ ಎರಡೆರಡು ಕಾಮಗಾರಿ ಮಾಡಿರುವುದಾಗಿ ಹೇಳಿ ಬಿಲ್ ತೆಗೆದಿದ್ದಾರೆ. ಇನ್ನು ಪರಿಶಿಷ್ಟ ಜಾತಿ ಪಂಗಡದವರಿಗೆ ಬಳಕೆ ಮಾಡಬೇಕಾಗಿದ್ದ 25% ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೇ ಮೋಸ ಮಾಡಿದ್ದಾರೆಂದು ಆರೋಪಿಸಿದ್ದರು. ಈ ಕುರಿತಂತೆ ಪರಿಶೀಲನೆಗೆ ಸಾರ್ವಜನಿಕರು ತಾಲೂಕಾ ಪಂಚಾಯತ ಮುಖ್ಯಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಪರಿಶೀಲನೆ ನಡೆಸಿದರು.
ಈ ವೇಳೆ ಪಂಚಾಯತ ಅನುದಾನದಲ್ಲಿ ಮಾಡಲಾದ ಎಲ್ಲಾ ಕಾಮಗಾರಿಗಳನ್ನು ತಾಲೂಕಾ ಪಂಚಾಯತ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್ ಕೋಲಕಾರ್, ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪಂಗಡ ಅನುದಾನದ ಕುರಿತು ದುರ್ಬಳಕೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ಮಾಡಲಾಯಿತು. ಇನ್ನು ಪರಿಶಿಷ್ಟ ಜಾತಿಗೆ ನೀಡಿದ್ದ ಅನುದಾನವನ್ನು ಗ್ರಾಮದ ಬೇರೆ ಕಡೆ ಅಭಿವೃದ್ಧಿ ಕಾರ್ಯವನ್ನು ಮಾಲಾಗಿದೆ. ಇದರಿಂದ ಎಸ್‍ಸಿ ಎಸ್‍ಟಿ ಜನರಿಗೆ ಅನ್ಯಾಯವಾಗಿದೆ. ಈ ಕುರಿತಂತೆ ಅಧಿಕಾರಿಗಳ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಏನೆಲ್ಲ ಕ್ರಮ ಜರುಗಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.