ಈ ವೇಳೆ ನಾನೇನೂ ಕಡಿಮೆ ಇಲ್ಲ ಎಂಬಂತೆ ಕಾಂಗ್ರೆಸ್ ಯುವ ಮುಖಂಡ ಮಹಮ್ಮದ್ ಹ್ಯಾರಿಸ್ ನಲಪಾಡ್ (Mohammed Haris Nalapad) ಕೂಡ ಮಾತಿನ ಭರದಲ್ಲಿ ಅದೇ ರೀತಿ ತಲೆ ಕಟ್ ಮಾಡೋಕು ರೆಡಿ ಇದ್ದೀವಿ ಎಂದಿದ್ದಾರೆ.
ನಿನ್ನೆಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಇಮ್ರಾನ್
ನಿನ್ನೆ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ, ಟಿಪ್ಪು ನಾಡಲ್ಲಿ ಹುಟ್ಟಿದ ನಿಮಗೆ ತಲೆ ಕಡಿಯೋದು ಗೊತ್ತು, ತಲೆ ತಗ್ಗಿಸೋದು ಗೊತ್ತಿಲ್ಲ ಎಂದಿದ್ದರು. ಇದು ರಾಜ್ಯದಲ್ಲಿ ಸಾಕಷ್ಟು ಚೆರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಬಿಜೆಪಿ ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ವಿರುದ್ದ ಮಾತಿನ ಸಮರ ಆರಂಭಿಸಿತ್ತು. ಅಲ್ಲದೆ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಆಗ್ತಿದ್ದಂತೆ ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಕಾರಣವಾಗಿತ್ತು.
ಹೇಳಿಕೆಯನ್ನ ತಿರುಚಲಾಗ್ತಿದೆ ಎಂದ ಇಮ್ರಾನ್
ಇಂದು ಜಿಲ್ಲಾ ಪ್ರವಾಸ ನಡೆಸಿದ ಇಮ್ರಾನ್, ಮಂಡ್ಯ ನಗರದಲ್ಲಿ ಮಾತನಾಡಿ, ಕೆಲವರಿಂದ ನನ್ನ ಹೇಳಿಕೆ ತಿರುಚುವ ಯತ್ನ ನಡೆಯುತ್ತಿದೆ. ನಿನ್ನೆ ನಾನು ಹೇಳಿದ್ದು ನಮ್ಮ ಹಕ್ಕಿಗಾಗಿ ನಾವು ತಲೆ ಕೊಡ್ತೀವಿ. ನಾವೆಂದೂ ತಲೆ ತಗ್ಗಿಸುವ ಕೆಲಸ ಮಾಡಲ್ಲ ಅಂದಿದ್ದೆ. ಇದನ್ನ ಮಾಧ್ಯಮಗಳು ಅವಲೋಕನ ಮಾಡಬೇಕಿದೆ. ಆದ್ರೆ ಬಿಜೆಪಿಯವರು ಇದನ್ನೇ ವಿವಾದ ಮಾಡ್ತಿದ್ದಾರೆ. ದೇಶಕ್ಕಾಗಿ ತಲೆ ಕತ್ತರಿಸಿಕೊಳ್ಳೋದು ತಪ್ಪು ಅನ್ನೋದಾದರೆ, ಬಿಜೆಪಿಯವರದ್ದು ಯಾವ ಸೀಮೆಯ ರಾಷ್ಟ್ರ ಪ್ರೇಮ? ನಾವು ಅವತ್ತಿಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ವಿ, ಇವತ್ತಿಗೂ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸಿದ್ಧ ಎಂದರು.
: ಇಷ್ಟು ವಯಸ್ಸಾಗಿದೆ ಏನು ಮಾತಾಡಬೇಕು ಅನ್ನೋ ಬಗ್ಗೆ ಬುದ್ಧಿ ಇಲ್ವಾ? Hamsalekha ಹೇಳಿಕೆಗೆ ಮುತಾಲಿಕ್ ಕಿಡಿ
ನಲಪಾಡ್ ವಿವಾದಾತ್ಮಕ ಹೇಳಿಕೆ
ಇಮ್ರಾನ್ ಜೊತೆ ಮಂಡ್ಯಕ್ಕೆ ಆಗಮಿಸಿದ್ದ ಮಹಮ್ಮದ್ ಹ್ಯಾರಿಸ್ ನಲಪಾಡ್ ಕೂಡ ಇಮ್ರಾನ್ ಹೇಳಿದ ರೀತಿಯಲ್ಲೆ ಕಡಿತಿವಿ, ತಲೆ ತಗ್ಗಿಸಲ್ಲ ಎಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ದೇಶಕ್ಕೋಸ್ಕರ ನಮ್ಮ ತಲೆಯನ್ನು ಕಡಿಸಿಕೊಳ್ಳುತ್ತೇವೆ, ಹಾಗೆ ನಾವು ತಲೆಯನ್ನು ಕಟ್ ಮಾಡೋಕು ರೆಡಿ ಇದ್ದೀವಿ. ಆದ್ರೆ ನಾವು ಭಯಪಟ್ಟು ತಲೆಯನ್ನು ಬಗ್ಗಿಸಲು ತಯಾರಿಲ್ಲ. ನಾವು ತಲೆಯನ್ನು ಕಟ್ ಮಾಡಿಸೋರು ಅಂದ್ರು. ಅಷ್ಟೇ ಅಲ್ಲದೆ ಬಿಜೆಪಿ ಅವರಿಗೆ ಹಿಂದಿ ಬರುವುದಿಲ್ಲ. ಅವರು ಹಿಂದಿ ಕ್ಲಾಸ್‌ಗೆ ಹೋಗಬೇಕು ಅಂತ ಟೀಕಿಸಿದ್ರು.
ದೊಡ್ಡ ವಿಷಯ ಮಾಡಬೇಡಿ
ಡಿಕೆಶಿ ವರ್ಸಸ್ ಜಮೀರ್ ಬೆಂಬಲಿಗರ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಮ್ರಾನ್, ಆ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿದ್ದರು. ಅವರೆಲ್ಲರೂ ಕಾಂಗ್ರೆಸ್ ಜಿಂದಾಬಾದ್ ಅಂತಾ ಕೂಗುತ್ತಿದ್ದರು. ಯಾರೋ ನಾಲ್ಕು ಜನರ ಕೂಗಿಗೆ ತಲೆ ಕೆಡಿಸಿಕೊಳ್ಳಬಾರದು. ಕಾಂಗ್ರೆಸ್ ಪರ ಘೋಷಣೆ ಕೂಗುವವರಿಗೆ ಮನ್ನಣೆ ಕೊಡಬೇಕು.ಲೋಕಲ್ ಪಾಲಿಟಿಕ್ಸ್ ಗೆ ಯಾಕಿಷ್ಟು ಮನ್ನಣೆ ಕೊಡ್ತೀರಿ ಅಂತ ಮಾಧ್ಯಮಗಳಿಗೆ ಇಮ್ರಾನ್ ಮರು ಪ್ರಶ್ನೆ ಹಾಕಿದ್ರು.
ಜಮೀರ್ ತಿರುಗೇಟು
ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರನ್ನು ತುಳಿಯುತ್ತಿದ್ದಾರೆ, ಅದಕ್ಕೆ ಕಾರ್ಯಕ್ರಮಕ್ಕೆ ಜಮೀರ್ನ ಕರೆದಿಲ್ಲ ಎಂದ ರೇಣುಕಾಚಾರ್ಯ ಆರೋಪಕ್ಕೆ ಜಮೀರ್ ದೆಹಲಿಯಲ್ಲಿ ತಿರುಗೇಟು ನೀಡಿದರು. ರೇಣುಕಾಚಾರ್ಯಗೆ ಆ ರೀತಿಯ ಅನುಭವ ಆಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆಗಿದ್ದ ಕಾರಣ ಅವರನ್ನು ತುಳಿದಿದ್ದಾರೆ. ಯಡಿಯೂರಪ್ಪ ಜೊತೆಗಿದ್ದ ಕಾರಣ ಅವರನ್ನು ಮಂತ್ರಿ ಮಾಡಿಲ್ಲ. ತುಳಿಯುವ ಸಂಸ್ಕೃತಿ ಬಿಜೆಪಿಯಲ್ಲಿದೆ. ಆ ಸಂಸ್ಕೃತಿ ಕಾಂಗ್ರೆಸ್ನಲ್ಲೂ ಇದೆ ಎಂದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಆ ಸಂಸ್ಕೃತಿ ಇಲ್ಲ ಎಂದು ಮಾತಿನಲ್ಲೇ ತಿವಿದರು.