ಧಾರವಾಡ: ಸಂಭ್ರಮದಿಂದ ಕುಟುಂಬಸ್ಥರೆಲ್ಲಾ ಮದುವೆ ದಿಬ್ಬಣಕ್ಕೆಂದು ಹೊರಟಿದ್ದರು. ಕುಟುಂಬಸ್ಥರು, ಸಂಬಂಧಿಕರೆಲ್ಲಾ ಇದ್ದ ಬಸ್ ಬ್ರೇಕ್ ಫೇಲ್ಯೂರ್ ಆಗಿತ್ತು.
ಡ್ರೈವರ್ ಸಮಯ ಪ್ರಜ್ಞೆಯಿಂದ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಈ ಘಟನೆ ಧಾರವಾಡ ನವಲೂರು ಕ್ರಾಸ್ ಬಳಿ ನಡೆದಿದೆ.
ಬಸ್ ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ ಜನರನ್ನು ಹತ್ತಿಸಿಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಬ್ರೇಕ್ ಫೇಲ್ಯೂರ್ ಆಗಿರೋದು ಗೊತ್ತಾಗಿದೆ. ಡ್ರೈವರ್ ಆತಂಕಗೊಳ್ಳದೆ ಜನರನ್ನು ಕಾಪಾಡುವತ್ತಾ ಗಮನ ಹರಿಸಿದ್ದಾರೆ. ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಅಪಾಯ ತಪ್ಪಿಸಿದ್ದಾರೆ.
ಬಸ್ ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಾಳುಗಳಿಗೆ ಹತ್ತಿರದ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನ ಮುಂದಗಡೆ ಗಾಜು ಪುಡಿ ಪುಡಿಯಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಎಲ್ಲರ ಜೀವ ಉಳಿದಿದೆ.
Laxmi News 24×7