ಸಾಮಾಜಿಕ ಜಾಲತಾಣದಲ್ಲಿ ವೈದ್ಯರೊಬ್ಬರು ಸಗಣಿ ತಿನ್ನುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಯ್ಯೋ, ವೈದ್ಯರ್ಯಾಕಪ್ಪ ಸಗಣಿ ತಿಂತರೇ ಅನ್ನೋ ಕುತೂಹಲ ನಿಮ್ಮನ್ನ ಕಾಡ್ತಿರಬೇಕು. ಇಲ್ನೋಡಿ, ಅದಕ್ಕೂ ಆ ವೈದ್ಯರೇ ಉತ್ತರ ನೀಡ್ತಾರೆ.
ಎಂಬಿಬಿಎಸ್ ಪದವಿ ಪಡೆದಿರುವ ಈ ವೈದ್ಯರ ಹೆಸ್ರು ಮನೋಜ್ ಮಿತ್ತಲ್ ಅಂತಾ.. ಕರ್ನಾಲ್ ನಿವಾಸಿ. ಕಳೆದ ಹಲವು ವರ್ಷಗಳಿಂದ ಗೋಮೂತ್ರ ಕುಡಿದು, ಸಗಣಿ ತಿನ್ನುತ್ತಿರುವ ಇವ್ರು ಸಗಣಿಯ ಮಹತ್ವವನ್ನ ಮನ ಮುಟ್ಟುವಂತೆ ವಿವರಿಸುತ್ತಾರೆ. ಈ ವೈದ್ಯರು ಹೇಳುವಂತೆ, ಹಸುವಿನ ಸಗಣಿಯಲ್ಲಿ ಬಿ ಜೀವಸತ್ವಗಳು ಅಧಿಕ ಪ್ರಮಾಣದಲ್ಲಿವೆ. ಇವು ಅಕ್ಷರಶಃ ವಿಕಿರಣದಿಂದ ರಕ್ಷಿಸುತ್ವೆ. ಇನ್ನು ಮೊಬೈಲ್ʼಗಳು, ಎಸಿಗಳು, ಫ್ರಿಡ್ಜ್ ಮತ್ತು ಇತರ ವಿದ್ಯುತ್ ಉಪಕರಣಗಳಿಂದ ಹೊರ ಸೂಸುವ ಈ ವಿಕಿರಣಗಳು ಕ್ಯಾನ್ಸರ್ʼನಂತಹ ರೋಗಗಳಿಗೆ ಕಾರಣವಾಗುತ್ತೆ. ಆದ್ರೆ, ಸಗಣಿ ತಿನ್ನುವುದರಿಂದ ವಿಕಿರಣದ ಪರಿಣಾಮ ಕಡಿಮೆ ಮಾಡಬಹುದು ಎಂದು ಮಿತ್ತಲ್ ಹೇಳಿದರು.
ಹೆರಿಗೆಯ ಸಮಯದಲ್ಲಿ ಗರ್ಭಿಣಿಯು ಹಸುವಿನ ಸಗಣಿಯನ್ನ ತಿಂದರೆ, ಹೆರಿಗೆಯ ಸಮಯದಲ್ಲಿ ಹೆಚ್ಚಿನ ಅಸ್ವಸ್ಥತೆ ಇರುವುದಿಲ್ಲ. ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ಗುಣಮುಖವಾಗುತ್ವೆ ಎಂದು ಮಿತ್ತಲ್ ಹೇಳಿದ್ದಾರೆ. ಅಸಲಿಗೆ ಶಿಶು ವೈದ್ಯರಾಗಿರುವ ಮನೋಜ್ ಮಿತ್ತಲ್, ಕರ್ನಾಲ್ʼನಲ್ಲಿ ದೊಡ್ಡ ಆಸ್ಪತ್ರೆಯನ್ನ ಹೊಂದಿದ್ದಾರೆ. ಇನ್ನು ಯಾವಾಗಲೂ ನೆಲದ ಮೇಲೆಯೇ ಮಲಗುವ ಇವ್ರು ಎಸಿ ಗಿಸಿ ಎಲ್ಲ ನನ್ನಿಂದ ದೂರ ದೂರ ಅಂತಾರೆ.
ಈ ವೈದ್ಯರು ಹೇಳುವಂತೆ, ಹಸುವಿನ ಸಗಣಿಯಲ್ಲಿ ಶೇ.28ರಷ್ಟು ಆಮ್ಲಜನಕ ಇದೆ. ಹಾಗಾಗಿಯೇ ತಾನು ಆರೋಗ್ಯದಿಂದಿರುವುದಾಗಿ ಹೇಳಿಕೊಂಡಿದ್ದಾರೆ. ಸಧ್ಯ ಮನೋಜ್ ಮಿತ್ತಲ್ ಅವ್ರ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ವಿವಿಧ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಮನೋಜ್ ಪದವಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರೆ, ಇನ್ನು ಹಲವರು ಅಕ್ಷರಶಃ ಇವ್ರ ಮಾತು ನಿಜ ಅಂತಾ ಒಪ್ಪಿಕೊಂಡಿದ್ದಾರೆ.