ಆಲೂರು: ಗೋಪಾಲಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿದ್ದು ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಸ್ಥಳಿಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸಮಾಜ ಸೇವಕ ಬಿಜೆಪಿ ಹಿರಿಯ ಮುಖಂಡ ಉದಯ್ ಗೌಡರ ಹೆಸರು ಬಲವಾಗಿ ಕೇಳಿ ಬರುತ್ತಿದೆ.
ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಗೊಳಿಸುವ ದೃಷ್ಟಿಯಿಂದವ ರಾಜ್ಯ ಬಿಜೆಪಿ ಈ ಚಿಂತನೆ ನಡೆಸುತ್ತಿದೆ ಎನ್ನುವ ಮಾತುಗಳು ಕೆಲವು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಲೂರು -ಸಕಲೇಶಪುರ ಕ್ಷೇತ್ರದಿಂದ ನಾರ್ವೇ ಸೋಮಶೇಖರ್ ಅವರಿಗೆ ಟಿಕೆಟ್ ಕೊಡಿಸಿ ಜಯದ ಹೊಸ್ತಿಲಿಗೆ ತಂದಿದ್ದ ಉದ್ಯಮಿಯಾಗಿರುವ ಉದಯ್ ಗೌಡ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಲಿದೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಲೂರು-ಸಕಲೇಶಪುರ ಸೇರಿದಂತೆ ಸಮೀಪವಿರುವ ಬೇಲೂರು, ಅರಕಲಗೂಡು, ಕ್ಷೇತ್ರಗಳಿಗೂ ಬಿಜೆಪಿ ಗೆ ಶಕ್ತಿ ತುಂಬಿದಂತಾಗುತ್ತದೆ ಎನ್ನುವುದು ರಾಜ್ಯ ಬಿಜೆಪಿ ಮುಖಂಡರ ಲೆಕ್ಕಚಾರವಾಗಿದೆ.