ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಲು ನಮ್ಮ ಬಳಿ ಸರ್ಕಾರವಿಲ್ಲ. ಏನೂ ಇಲ್ಲ ಅಂದ ಮೇಲೆ ಚಾರ್ಜ್‍ಶೀಟ್ ಏಕೆ ಹಾಕಿದ್ರಿ. ಜಾರಿ ನಿರ್ದೇಶನಾಲಯಕ್ಕೆ ಏಕೆ ತನಿಖೆಗೆ ಬರೆದಿದ್ದೀರಿ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ನಮ್ಮ ಬಳಿ ಸರ್ಕಾರ ಇಲ್ಲ. ನಮ್ಮ ಬಳಿ ಅವರು ಕೊಡ್ತಿರುವ ಮಾಹಿತಿಯμÉ್ಟೀ ಇದೆ. ಇಬ್ಬರು ಮಂತ್ರಿಗಳು ಗಾಸಿಪ್ ಮಾಡ್ತಿದ್ದಾರೆ ಎಂದಿದ್ದಾರೆ. ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಯಾರು ಆ ಸಚಿವರು, ಅವರ ಮೇಲೆ ಏಕೆ ಕ್ರಮವಿಲ್ಲ..? ಏನೂ ಇಲ್ಲ ಅಂದ್ರೆ ಚಾರ್ಜ್‍ಶೀಟ್ ಏಕೆ ದಾಖಲಿಸಿದ್ರು..? ಏನೂ ಇಲ್ಲ ಅಂದ್ರೆ ಅಂದೇ ಹೇಳಬೇಕಿತ್ತು. ಬಿಟ್ ಕಾಯಿನ್ ನಿಮ್ಮ ಬಳಿ ಇಟ್ಕೊಂಡು ಹೀಗೆ ಹೇಳ್ತೀರಾ..? ಯಾಕೆ ಇಡಿಗೆ ಬರೆದ್ರಿ..? ಇಡಿಗೆ ಬರೆಯೋದು ಸರ್ಕಾರದ ನಿರ್ಧಾರ, ವೈಯಕ್ತಿಕ ಅಲ್ಲ. ಬೆಂಕಿ ಇಲ್ಲದೇ ಹೊಗೆ ಆಡುತ್ತಾ ಪ್ರಶ್ನಿಸಿದರು.
ಒಬ್ಬ ವ್ಯಕ್ತಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಎಲ್ಲ ಮಾಹಿತಿ ನೀಡಿದ್ದಾರೆ. ಮಂತ್ರಿಗಳ ಹೆಸರು ಸೇರಿ ಎಲ್ಲವನ್ನೂ ಉಲ್ಲೇಖ ಮಾಡಿದ್ದಾರೆ. ಅದು ಸುಳ್ಳಾಗಿದ್ದರೆ ಪತ್ರ ಬರೆದವರ ಮೇಲೆ ಏಕೆ ಕ್ರಮವಿಲ್ಲ..? ಪಾಪ ಆ ಹುಡುಗ ತಪ್ಪಿಸಿಕೊಂಡು ಹೋಗಿ ಸರೆಂಡರ್ ಆದ ಎಂದು ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದರು.