Breaking News

ಚಿತ್ರಪ್ರೇಮಿಗಳು ಕೊಂಡಾಡ್ತಿರೋ ‘ಜೈ ಭೀಮ್’ ಸುತ್ತ ವಿವಾದದ ಸುಳಿ..!

Spread the love

ಸಿನಿಮಾಗಳೇ ಹಾಗೆ.. ಸಿನಿಮಾದೊಳಗಿನ ಕಂಟೆಂಟ್ ಯಾರಿಗಾದರೂ ಇಷ್ಟವಾಗಿ ಬಿಟ್ಟರೆ ಅದನ್ನ ಮತ್ತಷ್ಟು ಜನಕ್ಕೆ ಹೇಳಿ, ನೀವೂ ನೋಡಿ ಅಂತಾರೆ. ಸೂರ್ಯ ನಟನೆಯ ಜೈ ಭೀಮ್ ಸಿನಿಮಾವೂ ಆಗಿದ್ದು, ಅದೇ.

ಸಿನಿಮಾ ನೋಡಿದ ಪ್ರತಿಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್ ಗೆ ಹಾಕಿಕೊಳ್ಳೋದಕ್ಕೆ ಶುರು ಮಾಡಿದ್ರು. ಸ್ಟೇಟಸ್, ಆ ಸಿನಿಮಾದ ಬಗ್ಗೆ ಬಂದಿರುವ ಪಾಸಿಟಿವ್ ಒಪಿನಿಯನ್ ನೋಡಿ ಮತ್ತೊಂದಷ್ಟು ಜನ ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ರು.

ಜೈ ಭೀಮ್ ಸಿನಿಮಾ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವಂತ ಸಿನಿಮಾವಾಗಿದೆ. ನೇರ ಓಟಿಟಿ ಫ್ಲಾಟ್ ಫಾರಂ ನಲ್ಲಿ ರಿಲೀಸ್ ಆಗಿದ್ದು, ಅಂದಿನಿಂದ ಇಂದಿನವರೆಗೆ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ. ಹೀಗಿರುವಾಗ ಒಂದಷ್ಟು ವಿವಾದವೂ ಸಿನಿಮಾದ ಮೈಗಂಟಿಕೊಂಡಿದೆ.

ಈ ಸಿನಿಮಾದಿಂದಾಚೆಗೆ ಪ್ರಕಾಶ್ ರೈ ಅವರನ್ನ ಹಿಂದಿ ವಿರೋಧಿ ಎಂದು ಬಣ್ಣಿಸುತ್ತಿದ್ದಾರೆ. ಯಾಕಂದ್ರೆ ಪ್ರಕಾಶ್ ರೈ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಚಾರಣೆ ನಡೆಸುತ್ತಿರುತ್ತಾರೆ. ಒಬ್ಬ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ ಕೂಡಲೇ ಕಪಾಳಕ್ಕೆ ಹೊಡೆಯುತ್ತಾರೆ. ಹೀಗಾಗಿ ಒಂದಷ್ಟು ಜನ ಪ್ರಕಾಶ್ ರೈ ಅವರನ್ನ ಹಿಂದಿ ವಿರೋಧಿ ಎಂದೇ ಬಿಂಬಿಸುತ್ತಿದ್ದಾರೆ. ಜೊತೆಗೆ ಆ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಕೇಳಿ ಬರ್ತಿದೆ.

ಇದಕ್ಕೆ ಈಗಾಗ್ಲೇ ಪ್ರಕಾಶ್ ರೈ ಉತ್ತರವನ್ನು ಕೊಟ್ಟಿದ್ದಾರೆ. ಸಿನಿಮಾದಲ್ಲಿ ತಳಮಟ್ಟದವರ ಸ್ಥಿತಿಯನ್ನ ತೋರಿಸಲಾಗಿದೆ. ಅದು ಕಾಣಲಿಲ್ಲ. ಕಪಾಳಕ್ಕೆ ಹೊಡೆದದ್ದು ಕಂಡಿದೆ. ಇದು ವಿವಾದ ಮಾಡುವವರ ಮನಸ್ಥಿತಿ ಎಂಥದ್ದು ಎಂಬುದನ್ನ ತೋರಿಸುತ್ತದೆ ಎಂದಿದ್ದಾರೆ.

ಇನ್ನು ಒಂದು ದೃಶ್ಯದಲ್ಲಿ ಸಣ್ಣ ಕ್ಯಾಲೆಂಡರ್ ಒಂದು ಕಾಣುತ್ತದೆ. ಅದರಲ್ಲಿ ಕಮ್ಯುನಿಯಲ್ ಚಿಹ್ನೆ ಇದೆ. ಇದಕ್ಕೂ ವಿರೋಧ ಎದ್ದ ಬಳಿಕ, ಡಿಜಿಟಲ್ ಎಡಿಟಿಂಗ್ ಮೂಲಕ ಚಿತ್ರತಂಡ ಲಕ್ಷ್ಮೀದೇವಿಯ ಪಟವನ್ನ ಹಾಕಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ