ಸಾರ್ವಜನಿಕರು ತಾವು ಅನಾರೋಗ್ಯ(Illness)ದಿಂದ ಬಳಲುತ್ತಿರುವಾಗ ಆಸ್ಪತ್ರೆ(Hospitals)ಗಳನ್ನೇ ಹುಡುಕಿಕೊಂಡು ಬರುತ್ತಾರೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬಂದಂತಹ ರೋಗಿ(Patients )ಗಳಿಗೆ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಒದಗಿಸುವುದು ಇವರ ಆದ್ಯ ಕರ್ತವ್ಯವಾಗಿರುತ್ತದೆ.
ದೇವಸ್ಥಾನ(Temples)ಗಳಿಂದ ಹೆಚ್ಚು ಪ್ರಾರ್ಥನೆ(Prayer) ಆಸ್ಪತ್ರೆಯಲ್ಲಿ ಮಾಡುತ್ತಾರೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರು ಹುಷಾರಾಗಿ ಇಲ್ಲಿಂದ ಹೋಗಬೇಕೆಂದು ಬಂದಿರುತ್ತಾರೆ. ರೋಗಿಗಳಿಗೆ ಅವರ ರೋಗವು ಬೇಗನೆ ವಾಸಿಯಾಗಲು ಈ ಆಸ್ಪತ್ರೆಗಳಲ್ಲಿರುವ ಮೂಲಭೂತ ಸೌಕರ್ಯಗಳು ಸಹ ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದರೆ ತಪ್ಪಾಗುವುದಿಲ್ಲ. ಆದರೆ ಇಲ್ಲೊಂದು ಆಸ್ಪತ್ರೆ ಇದೆ, ಇದು ಏನು ಎಡವಟ್ಟು ಮಾಡಿದೆ ಎಂದು ನೀವೇ ದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಈ ಆಸ್ಪತ್ರೆ ಇರುವುದು ಜಪಾನ್(Japan)ನಲ್ಲಿ ಮತ್ತು ಆಸ್ಪತ್ರೆ ಈ ಎಡವಟ್ಟನ್ನು ಎಷ್ಟು ವರ್ಷಗಳಿಂದ ಮಾಡುತ್ತಾ ಬಂದಿದೆ ನೀವೇ ನೋಡಿ. ಈ ರೀತಿಯ ಬೇಜವಾಬ್ದಾರಿ(Careless)ಯಿಂದ ಅದೆಷ್ಟು ರೋಗಿಗಳಿಗೆ ತೊಂದರೆಯಾಗಿದೆಯೋ ಆ ದೇವರೆ ಬಲ್ಲ.
ಟಾಯ್ಲೆಟ್ ನೀರು ಕುಡಿಯಲು ಬಳಕೆ!
ಯೋಮಿಯುರಿ ಶಿಂಬುನ್‌ನ ವರದಿಯ ಪ್ರಕಾರ, ಜಪಾನಿನ ಆಸ್ಪತ್ರೆಯೊಂದು ಗೊತ್ತಿರಲಾರದೇ ಶೌಚಾಲಯಗಳಿಗೆ ಮೀಸಲಾದ ಸಂಸ್ಕರಿಸಿದ ನೀರನ್ನು ಸುಮಾರು 30 ವರ್ಷಗಳ ಕಾಲ ಕುಡಿಯುವ ನೀರಿನಂತೆ ಬಳಸಿದೆ. ಕಳೆದ ತಿಂಗಳು ಈ ವಿಲಕ್ಷಣ ಘಟನೆ ಬೆಳಕಿಗೆ ಬಂದಿದ್ದು, ಇದು ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಆಸ್ಪತ್ರೆಯ ಉಪಾಧ್ಯಕ್ಷರಾದ ಕಜುಹಿಕೊ ನಕತಾನಿ ಮುಕ್ತವಾಗಿ ಸಾರ್ವಜನಿಕರಲ್ಲಿ ಕ್ಷಮೆ ಕೇಳಲು ಕಾರಣವಾಯಿತು. ಜಪಾನಿನ ಸುದ್ದಿ ಮಾಧ್ಯಮದ ಪ್ರಕಾರ, ಆಸ್ಪತ್ರೆಯು ಒಸಾಕಾ ವಿಶ್ವವಿದ್ಯಾಲಯದಲ್ಲಿದ್ದು, ಕ್ಲಿನಿಕ್ ಕಟ್ಟಡವು ವೈದ್ಯಕೀಯ ಬೋಧಕ ವರ್ಗಕ್ಕೆ ಜೋಡಿಸಲ್ಪಟ್ಟಿದೆ.
1993ರಿಂದ ಯಾರಿಗೂ ತಿಳಿದೆ ಇಲ್ಲ!
ಆಘಾತಕಾರಿ ಸಂಗತಿಯೆಂದರೆ, ಇಲ್ಲಿರುವ ಬಾವಿಯ ನೀರು ಸುಮಾರು 120 ಕೊಳಾಯಿಗಳಲ್ಲಿ ಹರಿಯುತ್ತಿತ್ತು, ಅವುಗಳನ್ನು ಕುಡಿಯುವ ನೀರು, ಕೈಗಳನ್ನು ತೊಳೆಯಲು ಮತ್ತು ಬಾಯಿ ಮುಕ್ಕಳಿಸಲು ಸಹ ಬಳಸಲಾಗುತ್ತಿತ್ತು. ಈ ಎಡವಟ್ಟು ನಿನ್ನೆ ಮೊನ್ನೆದಲ್ಲ, 1993ರಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದಾಗ ಈ ನೀರಿನ ಪೈಪ್‌ಗಳನ್ನು ಸರಿಯಾಗಿ ಕೊಳಾಯಿಗಳಿಗೆ ಸಂಪರ್ಕಿಸುವಲ್ಲಿ ಎಡವಟ್ಟು ನಡೆದು ಹೋಗಿದೆಯಂತೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಹೊಸ ಚಿಕಿತ್ಸಾ ಘಟಕ ನಿರ್ಮಿಸಲು ಪ್ರಾರಂಭಿಸುವವರೆಗೂ ಯಾರೂ ಈ ಸಮಸ್ಯೆಯನ್ನು ಗಮನಿಸಿರಲಿಲ್ಲ ಅಥವಾ ಬೆಳಕಿಗೆ ತಂದಿರಲಿಲ್ಲ ಎಂದು ಜಪಾನಿನ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಹೊಸ ಕಟ್ಟಡದ ನಿರ್ಮಾಣದ ಸಮಯದಲ್ಲಿ ಸುಮಾರು 30 ವರ್ಷಗಳಿಂದ ಅಸುರಕ್ಷಿತ ನೀರನ್ನು ಬಳಸುತ್ತಿರುವುದನ್ನು ಕಂಡುಹಿಡಿಯಲಾಯಿತು.
ಇದನ್ನು : ನೋಡ ನೋಡುತ್ತಿದ್ದಂತೆ ಜನರ ಮೇಲೆ ಹರಿದ Audi ಕಾರು: ಓರ್ವ ಸಾವು, 9 ಮಂದಿಗೆ ಗಾಯ
ಕ್ಷಮೆ ಕೋರಿದ ಆಸ್ಪತ್ರೆಯ ಉಪಾಧ್ಯಕ್ಷರಾದ ಕಜುಹಿಕೊ ನಕತಾನಿ
ಈ ಸಮಸ್ಯೆ ಬೆಳಕಿಗೆ ಬಂದ ನಂತರ, ಒಸಾಕಾ ವಿಶ್ವವಿದ್ಯಾಲಯವು ಈ ಬಗ್ಗೆ ತನಿಖೆ ನಡೆಸುತ್ತಿದೆ. ನೀರಿನ ಗುಣಮಟ್ಟ ಪರಿಶೀಲಿಸಲಾಗುತ್ತಿದೆಯಾದರೂ, ಯಾವುದೇ ಆರೋಗ್ಯ ಅಪಾಯ ದೃಢಪಟ್ಟಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಪ್ರತಿ ವಾರ ಬಣ್ಣ, ರುಚಿ ಮತ್ತು ವಾಸನೆಗಾಗಿ ನೀರನ್ನು ಪರಿಶೀಲಿಸುತ್ತಿರುವ ಬಗ್ಗೆ 2014ರಿಂದ ದಾಖಲೆಗಳು ಲಭ್ಯವಿದೆ. ಆದಾಗ್ಯೂ, ಅಂದಿನಿಂದ ಯಾವುದೇ ಸಮಸ್ಯೆಗಳು ಆಸ್ಪತ್ರೆಯಲ್ಲಿ ಆಗಿಲ್ಲ. ಆತಂಕ ಉಂಟು ಮಾಡಿದ್ದಕ್ಕಾಗಿ ನಕತಾನಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಕ್ತವಾಗಿ ಕ್ಷಮೆಯಾಚಿಸಿದರು. “ಸುಧಾರಿತ ವೈದ್ಯಕೀಯ ಆರೈಕೆ ಒದಗಿಸುವ ಒಸಾಕಾ ವಿಶ್ವವಿದ್ಯಾಲಯ ಆಸ್ಪತ್ರೆ ಇಂದು ಜನರ ಆತಂಕಕ್ಕೆ ಕಾರಣವಾಗಿರುವುದಕ್ಕೆ ನನಗೆ ತುಂಬಾ ವಿಷಾದವಿದೆ” ಎಂದು ಅವರು ತಿಳಿಸಿದರು.