ಗುತ್ತಿಗೆದಾರರು ಅಕ್ರಮವಾಗಿ ರೈತರ ಮೇಲೆ ದಬ್ಬಾಳಿಕೆ ಮಾಡಿ ರೈತರ ಜಮೀನುಗನ್ನು ಅತಿಕ್ರಮಿಸಿ ಹಲಗಾ ಮಚ್ಛೆ ಬೈಪಾಸ್ ರಸ್ತೆಯನ್ನು ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ಗುತ್ತಿಗೆದಾರರು ಅಕ್ರಮವಾಗಿ ರೈತರ ಜಮೀನನ್ನು ಅತಿಕ್ರಮಿಸಿ ಹಲಗಾ ಮಚ್ಛೆ ಬೈಪಾಸ್ ರಸ್ತೆಯನ್ನು ನಿರ್ಮಿಸುತ್ತಿದ್ದಾರೆ.
ಅಲ್ಲದೇ ಈ ಕುರಿತು ನ್ಯಾಯಾಲಯದ ಆದೇಶವಿದ್ದು, ಗುತ್ತಿಗೆದಾರರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿಯೇ ಕಟ್ಟಿಗೆಗೆ ಬೆಂಕಿ ಕಚ್ಚಿ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತಮುಖಂಡ ಪ್ರಕಾಶ ನಾಯಕ್, ಇಂದು ಬೆಳಿಗ್ಗೆ ಗುತ್ತಿಗೆದಾರರು ಕಾನೂನು ಬಾಹಿರವಾಗಿ ನ್ಯಾಯಾಲಯದ ಆದೇಶದ ವಿರುದ್ಧ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಮೊದಲಿಗೆ ಜೀರೋ ಪಾಯಿಂಟ್‍ನ್ನು ಗುರುತಿಸದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ರೀತಿ ಗುಂಡಾ ವರ್ತನೆ ಮಾಡುವುದನ್ನು ರೈತರು ಸಹಿಸುವುದಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅಧಿವೇಶನ ನಡೆಯಲಿದೆ.
ಸರಕಾರ ಎಲ್ಲವನ್ನು ಅರಿತುಕೊಂಡು ನಡೆಯಬೇಕು. ರೈತರ ತಾಳ್ಮೆಯನ್ನು ಪರೀಕೆ ಮಾಡಬಾರದು ಎಂದರು.
ಇನ್ನು ಬೈಪಾಸ್ ರಸ್ತೆ ನಿರ್ಮಾಣ ವಿವಾರವಾಗಿ ರೈತರು ತಮಗೆ ಅನ್ಯಾಯವಾಗುತ್ತಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇನ್ನು ಸರಕಾರ ಈ ಕುರಿತಂತೆ ರೈತರಿಗೆ ನ್ಯಾಯ ಕೊಡಿಸುತ್ತಾ ಎಂದು ಕಾದು ನೋಡಬೇಕಿದೆ.