ಬೆಳಗಾವಿಯ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಪ್ರಭಾಕರ್ ಕೋರೆ ಅವರು ನಂಜುಂಡಪ್ಪ ವರದಿಯಲ್ಲಿ ಉತ್ತಕರ್ನಾಟಕದಲ್ಲಿ ಏನು ಅಭಿವೃದ್ಧಿ ಆಗಬೇಕು ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪಶು ಆಸ್ಪತ್ರೆ ಎಷ್ಟು ಆಗಬೇಕು ಎಂಬ ಬಗ್ಗೆಯೂ ತಿಳಿಸಿದ್ದಾರೆ. ಹೀಗಾಗಿ ನಂಜುಂಡಪ್ಪ ವರದಿ ಸಂಪೂರ್ಣವಾಗಿ ಅನುಷ್ಠಾಕ್ಕೆ ಬಂದರೆ ನಮ್ಮ ಉತ್ತರಕರ್ನಾಟಕ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದ್ದು. ಈ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇನ್ನು ಕಾಂಗ್ರೆಸ್ ನಾಯಕರ ಬಿಟ್ ಕಾಯಿನ್ ಆರೋಪಕ್ಕೆ ಇದೇ ವೇಳೆ ಪ್ರತಿಕ್ರಯಿಸಿದ ಅವರು ರಫೇಲ್ ಸಲುವಾಗಿ ಆರೋಪ ಮಾಡಿದ್ದರು. ನಿನ್ನೆ ಏನಾಯ್ತು..? ಅವರ ಪಕ್ಷದವರೇ ಅದರಲ್ಲಿ ಭಾಗಿಯಾಗಿದ್ದರು, ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬುದನ್ನು ಫ್ರಾನ್ಸನವರೇ ಹೇಳಿದ್ದಾರೆ. ಬಿಟ್ ಕಾಯಿನ್ ಒಂದು ಮಟಕಾ ಇದ್ದ ಹಾಗೆ, ಮಟಕಾ ಆಡುವ ಜನರಿದ್ದಾರೆ. ಆದರೆ ಇದರಲ್ಲಿ ರಾಜಕಾರಣಿಗಳು ಇಲ್ಲ ಅಂತ ಹೇಳುವುದಿಲ್ಲ. ಅವರು ಆಡಿರಬಹುದು ಎಂದರು.
ಇನ್ನು ಸಿಎಂ ಬೊಮ್ಮಾಯಿ ಅವರನ್ನು ಬಿಟ್ ಕಾಯಿನ್ ವಿಚಾರ ಬಲಿ ಕೊಡುತ್ತೇವೆ ಎಂಬುದಕ್ಕೆ ಪ್ರತಿಕ್ರಯಿಸಿದ ಡಾ.ಪ್ರಭಾಕರ್ ಕೋರೆ ಅಂತಹದೇನು ಇಲ್ಲ, ಇವರು ಸಿಎಂ ಆದ ನಂತರ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಿದ್ದಾರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಎರಡು ವರ್ಷದ ಬಳಿಕ ಈ ಬಾರಿ ಸುವರ್ಣಸೌಧದಲ್ಲಿಯೇ ಅಧಿವೇಶನ ನಡೆಯಲಿದೆ. ಸಂಪೂರ್ಣ ಅಧಿವೇಶನ ಆಗಲು ಇಲ್ಲಿ ಶಾಸಕರ ಭವನ, ಮಂತ್ರಿಗಳ ಭವನ ಆಗಬೇಕು ಎಂಬ ಬಗ್ಗೆ ನಾನು ಸರ್ಕಾರ ಹಾಗೂ ಸಭಾಪತಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಇನ್ನು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಪಕ್ಷದಿಂದ ಓರ್ವ ಅಭ್ಯರ್ಥಿಯನ್ನು ಮಾಡುತ್ತೇವೆ. ಉಳಿದ ಪಕ್ಷದವರು ಎಷ್ಟು ಮಾಡುತ್ತಾರೆ ಗೊತ್ತಿಲ್ಲ. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ. ನಮ್ಮ ಆತ್ಮೀಯ ಮಿತ್ರ ಮಹಾಂತೇಶ ಕವಟಗಿಮಠ ಅವರ ಸಲುವಾಗಿ ಪ್ರಯತ್ನ ಮಾಡುತ್ತೇವೆ. ಬಹುತೇಕ ಅವರಿಗೆ ಪಕ್ಷದವರು ಟಿಕೆಟ್ ಕೊಡಬಹುದು ಎನ್ನುವ ಆಸೆ ನನಗಿದೆ ಎಂದು ಇದೇ ವೇಳೆ ಡಾ.ಪ್ರಭಾಕರ್ ಕೋರೆ ಸ್ಪಷ್ಟಪಡಿಸಿದರು.