ಬೆಂಗಳೂರು: ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಡಿಸೆಂಬರ್ 10 ಕ್ಕೆ ಮತದಾನ ನಡೆಯಲಿದೆ.
ಒಟ್ಟು 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ವಿಧಾನಪರಿಷತ್ ನ ಸಭಾನಾಯಕ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ ಅವರ ಅವಧಿಯೂ ಮುಗಿದಿದ್ದು ಚುನಾವಣೆ ಎದುರಿಸಬೇಕಾಗಿದೆ.
ನಾಮಪತ್ರ ಸಲ್ಲಿಸಲು ನ. 23 ಕೊನೆ ದಿನ. ನ. 24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕಡೆ ದಿನವಾಗಿರಲಿದೆ.
ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.
Laxmi News 24×7