ಮೂರು ವರ್ಷಗಳಿಂದ ಸಾನ್ನದ ಗೃಹದಲ್ಲಿ ಯುವತಿಯರು ಸ್ನಾನಮಾಡುತ್ತಿರುವ ದೃಶ್ಯವನ್ನು ಹಿಡನ್ ಕ್ಯಾಮೆರಾದ ಮೂಲಕ ಚಿತ್ರೀಕರಿಸಿದ ಪ್ಲಂಬರ್ ಅನ್ನು ಬಂಧಿಸಲಾಗಿದೆ. ಬಾತ್ ರೂಮಿನ ಪ್ರತಿಯೊಂದು ಚಲನವಲನವನ್ನೂ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದು, ಒಂದು ದಿನ ಮಹಿಳೆಯೊಬ್ಬಳಿಗೆ ಅಲ್ಲಿ ಹಿಡನ್ ಕ್ಯಾಮೆರಾ ಇಟ್ಟಿರುವುದು ಗೊತ್ತಾಗಿದೆ. ನಂತರ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ಆಧಾರದಲ್ಲಿ ಪ್ಲಂಬರ್ ಸಿಕ್ಕಿಬಿದ್ದಿದ್ದು, ಆತನ ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ.

3 ವರ್ಷದಿಂದ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿಯುತ್ತಿದ್ದ ಖತರ್ನಾಕ್ ಪ್ಲಂಬರ್ ಕೊನೆಗೂ ಅಂದರ್!
ಬ್ರಿಟನ್ ನಲ್ಲಿ ಮಹಿಳೆಯೊಬ್ಬರ ಬಾತ್ ರೂಂ ರಿಪೇರಿ ಮಾಡಲು ಬಂದಿದ್ದ 57 ವರ್ಷದ ಜೇಮ್ಸ್ ಹೋಲ್ಮ್ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸುತ್ತಿದ್ದ. ಜೂನ್ 2018 ರಲ್ಲಿ ಮಹಿಳೆಯ ಜೇಮ್ಸ್ನನ್ನು ಮನೆಯ ನಲ್ಲಿ ಸರಿಪಡಿಸಲು ಕರೆದಿದ್ದರು.
ಇದೇ ವೇಳೆ ಮಹಿಳೆಯ ಮನೆಯ ಬಾತ್ ರೂಂನಲ್ಲಿ ರಹಸ್ಯವಾಗಿ ಕ್ಯಾಮೆರಾ ಅಳವಡಿಸಿದ್ದಾನೆ. ಅಂದಹಾಗೆಯೇ ಬ್ರಿಟನ್ ನ ನಾಟಿಂಗ್ ಹ್ಯಾಮ್ ನಲ್ಲಿ ಈ ಘಟನೆ ನಡೆದಿದೆ. ಪ್ಲಂಬರ್ ಮಾಡಿದ ಖತರ್ನಾಕ್ ಕೆಲಸ ಇದೀಗ ವೈರಲ್ ಆಗಿದೆ.
ಜೇಮ್ಸ್ ಜೋಲ್ಮ್ ಅನೇಕರ ಮನೆಗೆ ನಲ್ಲಿ ಸರಿಪಡಿಸಲು ಹೋಗುತ್ತಾನೆ. ಹೀಗೆ ಹೋದವನು ಬಾತ್ ರೂಂನಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಡುತ್ತಿದ್ದನು ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೇಮ್ಸ್ ಮನೆಗೆ ಹೋದ ಪೊಲೀಸರಿಗೆ ಕಂಪ್ಯೂಟರ್ನಲ್ಲಿ 302 ಮಕ್ಕಳ ಅಶ್ಲೀಲ ಚಿತ್ರಗಳು ಸಿಕ್ಕಿವೆ. ಪ್ರಾಣಿಗಳು ಮತ್ತು ಮನುಷ್ಯರು ಪರಸ್ಪರ ಸಂವಹನ ನಡೆಸುತ್ತಿರುವ ಫೋಟೋಗಳು ಸಹ ಸಿಕ್ಕಿವೆ.
ಜೇಮ್ಸ್ ಹೋಲ್ಮ್ ಹಿಡನ್ ಕ್ಯಾಮೆರಾ ಬಳಸಿ ಸ್ನಾನಗೃಹದಲ್ಲಿ ಮಹಿಳೆಯರ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದು, ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. ತಪ್ಪಿತಸ್ಥನಿಗೆ ನ್ಯಾಯಾಲಯ 12 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.